ಪಾಕ್‌ನಿಂದ ಮರಳಿದ ಅಭಿನಂದನ್ ಜೊತೆ ಏನೇಲ್ಲ ನಡೀತು, ಪಿನ್ ಟು ಪಿನ್ ಸುದ್ದಿ!

ಪಾಕಿಸ್ತಾನದಿಂದ ಬಿಡುಗಡೆಯಾಗಿ ಭಾರತಕ್ಕೆ ಮರಳಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರೊಂದಿಗೆ ಇಂದು ಗೌರವಯುತವಾಗಿ ವಿಚಾರಣೆ ನಡೆಸಲಾಯಿತು.
ಅಭಿನಂದನ್ ವರ್ಧಮಾನ್
ಅಭಿನಂದನ್ ವರ್ಧಮಾನ್
ನವದೆಹಲಿ: ಪಾಕಿಸ್ತಾನದಿಂದ ಬಿಡುಗಡೆಯಾಗಿ ಭಾರತಕ್ಕೆ ಮರಳಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರೊಂದಿಗೆ ಇಂದು ಗೌರವಯುತವಾಗಿ ವಿಚಾರಣೆ ನಡೆಸಲಾಯಿತು. 
ಶುಕ್ರವಾರ ರಾತ್ರಿ ವಾಘಾ ಗಡಿಯಿಂದ ಅಭಿನಂದನ್ ಅವರನ್ನು ಪಾಕಿಸ್ತಾನ ಭಾರತಕ್ಕೆ ಹಸ್ತಾಂತರಿಸಿತ್ತು. ನಂತರ ಭಾರತೀಯ ವಾಯುಸೇನೆ ಅಧಿಕಾರಿಗಳು ಅವರನ್ನು ಅಮೃತಸರದಿಂದ ವಿಮಾನದಲ್ಲಿ ದೆಹಲಿಗೆ ಕರೆತಂದಿದ್ದರು. ರಾತ್ರಿ 11.45ಕ್ಕೆ ದೆಹಲಿಗೆ ತಲುಪಿದ ಅಭಿನಂದನ್ ಅವರೊಂದಿಗೆ ಭಾರತೀಯ ವಾಯುಪಡೆ ಅಧಿಕಾರಿಗಳು, ಗುಪ್ತಚರ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸಿದರು.
ಇಂದು ಅಭಿನಂದನ್ ಅವರನ್ನು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಗಿಯಿ. ಪಾಕಿಸ್ತಾನದ ಸೇನೆ ಅಭಿನಂದನ್ ಅವರ ದೇಹದಲ್ಲಿ ಚಿಪ್ ಅಥವಾ ಡಿವೈಸ್ ಗಳಿಟ್ಟಿರುವ  ಶಂಕಿಯಿಂದ ಈ ವೈದ್ಯಕೀಯ ಚಿಕಿತ್ಸೆ ನಡೆಸಲಾಗಿತ್ತು. ಈ ವೈದ್ಯಕೀಯ ಪರೀಕ್ಷೆ ಭಾನುವಾರವೂ ಮುಂದುವರೆಯಲಿದೆ.
ಈ ಹಿಂದೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪುತ್ರ ಕೆಸಿ ಕಾರ್ಯಾಪ್ಪ ಅವರು ಸುಮಾರು 1 ತಿಂಗಳ ಕಾಲ ಪಾಕಿಸ್ತಾನದ ವಶದಲ್ಲಿದ್ದರು. ಅವರು ವಾಪಸ್ಸಾದಾಗ ಅವರನ್ನು ಈ ಎಲ್ಲ ಪರೀಕ್ಷೆಗೆ ಗುರಿಪಡಿಸಲಾಗಿತ್ತು. ಈಗ ಅಭಿನಂದನ್ ಅವರನ್ನು ಸಹ ವಿವಿಧ ವಿಭಾಗಗಳಲ್ಲೂ ವಿಚಾರಣೆ ನಡೆಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com