ಗಡಿಯಲ್ಲಿ ಪಾಕ್ ಉದ್ಧಟತನಕ್ಕೆ ತಿರುಗೇಟು: ಪೂಂಛ್, ರಜೌರಿಯಲ್ಲಿ ಒಂದೇ ತಿಂಗಳಲ್ಲಿ 400 ಬಂಕರ್ ನಿರ್ಮಾಣ

ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ ಭಾರಿ ಪ್ರಮಾಣದ ಶೆಲ್ಲಿಂಗ್ ಮಾಡುತ್ತಿರುವಂತೆಯೇ ಇತ್ತ ಭಾರತ ಸರ್ಕಾರ ಕೂಡ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿದ್ದು, ಪೂಂಛ್ ಮತ್ತು ರಜೌರಿ ಜಿಲ್ಲೆಗಳಲ್ಲಿ 400 ಬಂಕರ್ ನಿರ್ಮಾಣಕ್ಕೆ ಅಸ್ತು ಎಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶ್ರೀನಗರ: ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ ಭಾರಿ ಪ್ರಮಾಣದ ಶೆಲ್ಲಿಂಗ್ ಮಾಡುತ್ತಿರುವಂತೆಯೇ ಇತ್ತ ಭಾರತ ಸರ್ಕಾರ ಕೂಡ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿದ್ದು, ಪೂಂಛ್ ಮತ್ತು ರಜೌರಿ ಜಿಲ್ಲೆಗಳಲ್ಲಿ 400 ಬಂಕರ್ ನಿರ್ಮಾಣಕ್ಕೆ ಅಸ್ತು ಎಂದಿದೆ.
ಹೌದು.. ರಜೌರಿ ಮತ್ತು ಪೂಂಛ್ ಜಿಲ್ಲೆಗಳಲ್ಲಿ ತಲಾ 200 ಬಂಕರ್ ಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅಸ್ತು ಎಂದಿದ್ದು, ಇನ್ನೊಂದು ತಿಂಗಳಲ್ಲೇ ಈ ಬಂಕರ್ ಗಳ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಇನ್ನು ಪುಲ್ವಾಮ ದಾಳಿ ಬಳಿಕ ಪಾಕಿಸ್ತಾನಕ್ಕೆ ಏರ್ ಸ್ಟ್ರೈಕ್ ಮೂಲಕ ಮುಟ್ಟಿನೋಡಿಕೊಳ್ಳುವಂತೆ ಭಾರತ ತಿರುಗೇಟು ನೀಡಿತ್ತು. ಆದರೆ ಈ ದಾಳಿ ಬಳಿಕ ಗಡಿಯಲ್ಲಿ ಪಾಕಿಸ್ತಾನ ಸೇನೆ ತನ್ನ ದಾಳಿ ಪ್ರಮಾಣವನ್ನು ಹೆಚ್ಚಿಸಿದ್ದು. ಗಡಿಯಲ್ಲಿ ಅಕ್ಷರಶಃ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಗಡಿಗ್ರಾಮಗಳನ್ನು ಕ್ರಮೇಣ ತೆರವುಗೊಳಿಸಲಾಗುತ್ತಿದ್ದು, ಪಾಕಿಸ್ತಾನದ ಶೆಲ್ಲಿಂಗ್ ಗೆ ನೂರಾರು ಮನೆಗಳು ಧ್ವಂಸಗೊಂಡಿವೆ.
ಇದೇ ಕಾರಣಕ್ಕೆ ಪಾಕಿಸ್ತಾನಕ್ಕೆ ತಿರುಗೇಟು ನೀಡಲು ಭಾರತಕ್ಕೆ ಬಂಕರ್ ಗಳ ಅವಶ್ಯಕತೆ ಇದ್ದು, ಇದರ ಮೊದಲ ಕ್ರಮವಾಗಿ 400 ಬಂಕರ್ ಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com