ಪಿಒಕೆಯಲ್ಲಿ ಐಎಎಫ್ ಏರ್ ಸ್ಟ್ರೈಕ್; ನಟಿ ಪ್ರಿಯಾಂಕ ಛೋಪ್ರಾ ವಿರುದ್ಧ ಪಾಕಿಸ್ತಾನ ದೂರು

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ವಾಯುದಾಳಿಯನ್ನು ಪ್ರಶಂಸಿದ್ದ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ವಿರುದ್ಧ ಪಾಕಿಸ್ತಾನ ದೂರು ದಾಖಲಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ವಾಯುದಾಳಿಯನ್ನು ಪ್ರಶಂಸಿದ್ದ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ವಿರುದ್ಧ ಪಾಕಿಸ್ತಾನ ದೂರು ದಾಖಲಿಸಿದೆ.
ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾದ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿಗೆ ಸೌಹಾರ್ದಯುತ ರಾಯಭಾರಿ ಆಗಿರುವ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ವಿರುದ್ಧ ಪಾಕಿಸ್ತಾನ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಪ್ರಿಯಾಂಕರನ್ನು ಯೂನಿಸೆಫ್ ಗುಡ್ ವಿಲ್ ಅಂಬಾಸಿಡರ್ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದೆ.
ಭಾರತೀಯ ವಾಯು ಸೇನೆ ಪಾಕ್‌ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಉಗ್ರರ ಅಡಗು ತಾಣಗಳನ್ನು ದ್ವಂಸ ಮಾಡಿತ್ತು. ಇದನ್ನ ಬೆಂಬಲಿಸಿ ಪಿಗ್ಗಿ ಜೈ ಹಿಂದ್‌ ಇಂಡಿಯನ್ ಆರ್ಮ್ಡ್‌ ಫೋರ್ಸ್‌ ಅಂತ ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿರುವ ಪಾಕ್‌, ಆನ್‌ ಲೈನ್‌ ಮೂಲಕ ವಿಶ್ವಸಂಸ್ಥೆಗೆ ದೂರು ನೀಡಿದೆ. ಯುನೆಸೆಫ್‌ ನ ಸೌಹಾರ್ದಯುತ ರಾಯಭಾರಿಯಾಗಿರೋ ಪ್ರಿಯಾಂಕಾ ಈ ಎರಡೂ ದೇಶಗಳ ನಡುವಿನ ಕಲಹದಿಂದ ದೂರ ಉಳಿಯಬೇಕಿತ್ತು. ಜೊತೆಗೆ ಎರಡೂ ದೇಶಗಳ ನಡುವೆ ಶಾಂತಿ ಏರ್ಪಡಿಸಲು ಮುಂದಾಗಬೇಕಿತ್ತು. ಆದರೆ ಭಾರತದ ಪರವಾಗಿ ಟ್ವೀಟ್‌ ಮಾಡಿದ್ದಾರೆ. ಹೀಗಾಗಿ ಅವರನ್ನು ರಾಯಭಾರಿ ಹುದ್ದೆಯಿಂದ ಕೆಳಗಿಸಬೇಕು ಎಂದು ಒತ್ತಾಯಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com