ಪ್ರಧಾನಿ ಮೋದಿಯವರೇ ನಿಮಗೆ ನಾಚಿಕೆಯಿಲ್ಲವೇ, ರಫೆಲ್ ವಿಳಂಬಕ್ಕೆ ನೀವೇ ಕಾರಣ; ರಾಹುಲ್ ಗಾಂಧಿ

ರಫೆಲ್ ಯುದ್ಧ ವಿಮಾನ ಆಗಮನ ವಿಳಂಬಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.ದೇಶದ ಜನ ಪ್ರಧಾನಿಯವರ ಸರ್ವಾಧಿಕಾರದ ....
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ನವದೆಹಲಿ; ರಫೆಲ್ ಯುದ್ಧ ವಿಮಾನ ಆಗಮನ ವಿಳಂಬಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.ದೇಶದ ಜನ ಪ್ರಧಾನಿಯವರ ಸರ್ವಾಧಿಕಾರದ ಆತ್ಮಶ್ಲಾಘನೆಯನ್ನು ನೋಡುವ ದುರಸ್ಥಿ ಬಂದಿದೆ ಎಂದು ಟೀಕಿಸಿದರು.
ಪ್ರಧಾನಿಯವರೇ ನಿಮಗೆ ನಾಚಿಕೆಯಾಗುವುದಿಲ್ಲವೇ, ನೀವು 30 ಸಾವಿರ ಕೋಟಿ ರೂಪಾಯಿ ಕದ್ದು ನಿಮ್ಮ ಸ್ನೇಹಿತ ಅನಿಲ್ ಅಂಬಾನಿಯವರಿಗೆ ಕೊಟ್ಟಿದ್ದೀರಿ. ರಫೆಲ್ ಯುದ್ಧ ವಿಮಾನ ಆಗಮನ ವಿಳಂಬಕ್ಕೆ ನೀವೇ ಕಾರಣ ಎಂದು ನೇರವಾಗಿ ಆರೋಪಿಸಿದರು.
ನಿಮ್ಮಿಂದಾಗಿ ಧೈರ್ಯಶಾಲಿ ವಿಂಗ್ ಕಮಾಂಡರ್ ಅಭಿನಂದನ್ ಅಂತವರು ಹಳೆಯ ಯುದ್ಧ ವಿಮಾನಗಳನ್ನು ಹಾರಿಸಿ ತಮ್ಮ ಪ್ರಾಣವನ್ನು ಅಪಾಯಕ್ಕೊಡ್ಡಬೇಕಾದ ಸ್ಥಿತಿ ಬಂದಿದೆ ಎಂದು ಟ್ವೀಟ್ ಮೂಲಕ ಅಣಕಿಸಿದ್ದಾರೆ.
ಪ್ರಧಾನಿ ಮೋದಿಯವರು ಇಂಡಿಯಾ ಟುಡೇ ಸಭೆಯಲ್ಲಿ ಇತ್ತೀಚೆಗೆ ಮಾತನಾಡುವಾಗ ದೇಶ ರಫೆಲ್ ಯುದ್ಧ ವಿಮಾನ ಇಲ್ಲದಿರುವ ಕೊರತೆಯನ್ನು ಕಾಣುತ್ತಿದೆ. ರಫೆಲ್ ಯುದ್ಧ ವಿಮಾನ ಇರುತ್ತಿದ್ದರೆ ಭಾರತದ ಪರಿಸ್ಥಿತಿ ಬೇರೆಯದೇ ಆಗುತ್ತಿತ್ತು ಎಂದು ಹೇಳಿದ್ದರು. ರಫೆಲ್ ಯುದ್ಧ ವಿಮಾನ ಒಪ್ಪಂದ ಕುರಿತು ಕಾಂಗ್ರೆಸ್ ಸುಖಾಸುಮ್ಮನೆ ತಮ್ಮ ಸರ್ಕಾರದ ಮೇಲೆ ಆರೋಪ ಹೊರಿಸುತ್ತಿದೆ ಎಂದು ದೂರಿದ್ದರು.
ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರು ಸ್ವಗತ ಹೊಗಳಿಕೆಯಲ್ಲಿಯೇ ತೇಲುತ್ತಿದ್ದಾರೆ, 132 ಕೋಟಿ ಭಾರತೀಯರು ಪ್ರಜಾಪ್ರಭುತ್ವಕ್ಕಾಗಿ ಹಪಹಪಿಸುತ್ತಿದ್ದಾರೆ ಎಂಬುದನ್ನು ಮರೆತಿದ್ದಾರೆ. ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆ ವಿರುದ್ಧ ಮೋದಿಯವರು ದಿಟ್ಟ ಕ್ರಮ ಕೈಗೊಳ್ಳುವುದು ಯಾವಾಗ? ದೇಶದ ಭದ್ರತೆ ಜೊತೆ ರಾಜಿ ಮಾಡಿಕೊಂಡು ಗುಪ್ತಚರ ಇಲಾಖೆಯ ವೈಫಲ್ಯದಿಂದ ಮೋದಿಯವರೊಬ್ಬರ ಸ್ವಗತ ಶ್ಲಾಘನೆಯಿಂದ ಸರ್ಕಾರದ ಕಾರ್ಯವೈಖರಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಈ ಹಿಂದೆ ಹೇಳಿಕೆ ಹೊರಡಿಸಿದ್ದ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ, ಪುಲ್ವಾಮಾ ಭಯೋತ್ಪಾದಕ ದಾಳಿ ನಂತರ ದೇಶದ ಯೋಧರ ಧೈರ್ಯ, ಪರಾಕ್ರಮ ಮತ್ತು ತ್ಯಾಗವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಮೋದಿಯವರ ದಿಕ್ಕು ದೆಸೆಯಿಲ್ಲದ ನೀತಿಗಳು ಮತ್ತು ಆರ್ಥಿಕ ಸಮೀಪ ದೃಷ್ಟಿಕೋನಗಳು ಭಾರತದ ಆರ್ಥಿಕತೆಗೆ ಹಿನ್ನಡೆಯಾಗಿದೆ. ಮೋದಿಯವರ ಆರ್ಥಿಕ ನೀತಿ ದೇಶಕ್ಕೆ ಮಾರಕ ಎಂದು ಆರ್ಥಿಕ ತಜ್ಞರೇ ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದರು.
Dear PM,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com