'ಅಭಿನಂದನ್ ಯುಪಿಎ ಅವಧಿಯಲ್ಲಿ ಪೈಲಟ್ ಆಗಿ ಸೇರ್ಪಡೆ: ಸುಲ್ಮಾನ್ ಖುರ್ಷಿದ್ ಕಾಲೆಳೆದ ಟ್ವಿಟಿಗರು

ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ವಿಚಾರವಾಗಿ ಯುಪಿಎ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಸಲ್ಮಾನ್ ಖುರ್ಷಿದ್ ಟ್ರೋಲ್ ಗೊಳಗಾಗಿದ್ದಾರೆ.
ಸಲ್ಮಾನ್ ಖುರ್ಷಿದ್
ಸಲ್ಮಾನ್ ಖುರ್ಷಿದ್

ನವದೆಹಲಿ:ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ವಿಚಾರವಾಗಿ ಯುಪಿಎ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಸಲ್ಮಾನ್ ಖುರ್ಷಿದ್  ಟ್ರೋಲ್ ಗೊಳಗಾಗಿದ್ದಾರೆ.

ಅಭಿನಂದನ್ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಸಲ್ಮಾನ್ ಖುರ್ಷಿದ್,  ಪ್ರತಿಕೂಲ ಪರಿಸ್ಥಿತಿಯಲ್ಲಿ ಮಹಾನ್ ಸಮತೋಲನ ಮತ್ತು ವಿಶ್ವಾಸ ತೋರಿರುವ ಅಭಿನಂದನ್ ವರ್ಧಮಾನ್ 2004ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಯುದ್ಧ ವಿಮಾನದ ಪೈಲಟ್ ಆಗಿ  ಸೇವೆಗೆ ಸೇರಿದ್ದರು ಎಂದು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಗೆ ಹಲವು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಸಲ್ಮಾನ್ ಖುರ್ಷಿದ್ ಕಾಲೆಳೆಯುತ್ತಿದ್ದಾರೆ. ಹಾಗಾದ್ರೆ, ಅಭಿನಂದನ್  ಹುಟ್ಟಿದ್ದು ಕಾಂಗ್ರೆಸ್, ಅವಧಿಯಲ್ಲಿ ಇಂದಿರಾ ಗಾಂಧಿಗೆ ಈ ಕ್ರೆಡಿಟ್ ಕೊಡಬೇಕಲ್ಲವೇ ಎಂದು ಹಲವರು ವ್ಯಂಗ್ಯವಾಡಿದ್ದಾರೆ.

ಯುಪಿಎ ಅವದಿಯಲ್ಲಿ ಆಗಿರುವ ಹಗರಣಗಳ ಕುರಿತು ಕೆಲವರು ಪ್ರಸ್ತಾಪಿಸಿದ್ದಾರೆ.ಹಳೆಯ ಕಾಲದ ಮಿಗ್ 21 ವಿಮಾನವನ್ನು ಇಟ್ಟುಕೊಂಡಿದ್ದಕ್ಕೂ ಯುಪಿಎ ಕ್ರೆಡಿಟ್  ತೆಗೆದುಕೊಳ್ಳಬೇಕು ಎಂದು ಹಲವರು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com