ಬಾಲಾಕೋಟ್ ಏರ್ ಸ್ಟ್ರೈಕ್‍ ವೇಳೆ ಜೈಷ್ ಕ್ಯಾಂಪ್‌ನಲ್ಲಿ 300 ಮೊಬೈಲ್ ಆ್ಯಕ್ಟಿವ್: ಎನ್‌ಟಿಆರ್‌ಒ ವರದಿ

ಬಾಲಾಕೋಟ್ ನ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಕ್ಯಾಂಪ್ ಮೇಲೆ ಭಾರತೀಯ ವಾಯುಸೇನೆ ಏರ್ ಸ್ಟ್ರೈಕ್ ವೇಳೆ 300 ಮೊಬೈಲ್ ಆ್ಯಕ್ಟಿವ್ ಆಗಿದ್ದು ದಾಳಿ ಬಳಿಕ ಅವುಗಳು ನಾಶವಾಗಿದ್ದಾವೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಬಾಲಾಕೋಟ್ ನ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಕ್ಯಾಂಪ್ ಮೇಲೆ ಭಾರತೀಯ ವಾಯುಸೇನೆ ಏರ್ ಸ್ಟ್ರೈಕ್ ವೇಳೆ 300 ಮೊಬೈಲ್ ಆ್ಯಕ್ಟಿವ್ ಆಗಿದ್ದು ದಾಳಿ ಬಳಿಕ ಅವುಗಳು ನಾಶವಾಗಿದ್ದಾವೆ ಎಂದು ಎನ್‌ಟಿಆರ್‌ಒ ವರದಿ ದೃಢಪಡಿಸಿದೆ.
ಬಾಲಾಕೋಟ್ ಉಗ್ರರ ಕ್ಯಾಂಪ್ ಮೇಲಿನ ಏರ್ ಸ್ಟ್ರೈಕ್ ನಲ್ಲಿ ಎಷ್ಟು ಭಯೋತ್ಪಾದಕರು ಮೃತಪಟ್ಟಿದ್ದಾರೆ ಎಂಬ ಅಂಕಿ ಅಂಶಗಳ ಕುರಿತು ತೀವ್ರ ಚರ್ಚೆಗಳಾಗುತ್ತಿದ್ದು ಈ ಬಗ್ಗೆ ಇದೀಗ ವರದಿಯೊಂದು ಬಿತ್ತವಾಗಿದ್ದು ಏರ್ ಸ್ಟ್ರೈಕ್ ಗೂ ಮುನ್ನ 300ಕ್ಕೂ ಹೆಚ್ಚು ಮೊಬೈಲ್ ಗಳು ಆ್ಯಕ್ಟಿವ್ ಆಗಿದ್ದವು ಎಂದು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ(ಎನ್‌ಟಿಆರ್‌ಒ) ವರದಿ ದೃಢಪಡಿಸಿದೆ.
ದಾಳಿ ಬಳಿಕ ಈ ಮೊಬೈಲ್ ಗಳು ನಾಶವಾಗಿದ್ದವು. ಇದೇ ವಿಚಾರವಾಗಿ ಮಾಧ್ಯಮಗಳು ಸಹ ಸುಮಾರು 200 ರಿಂದ 300 ಭಯೋತ್ಪಾದಕರು ಮೃತಪಟ್ಟಿರಬಹುದು ಎಂದು ವರದಿ ಮಾಡಿದ್ದವು. ಇದೀಗ ಗುಪ್ತಚರ ಇಲಾಖೆ ಹಾಗೂ ತಾಂತ್ರಿಕ ಸಂಶೋಧನೆಗಳು ಇಷ್ಟೇ ಅಂಕಿ-ಅಂಶಗಳನ್ನು ನೀಡುತ್ತಿವೆ.
ಈ ಮಧ್ಯೆ ಏರ್ ಸ್ಟ್ರೈಕ್ ಕುರಿತಂತೆ ಮಾತನಾಡಿದ್ದ ಭಾರತೀಯ ವಾಯುಪಡೆ ಮುಖ್ಯಸ್ಥ ಬಿಎಸ್ ಧನೋವಾ ಸಹ ನಮ್ಮ ಪಡೆಗಳು ನಿಗದಿತ ಹಾಗೂ ನಿರ್ದಿಷ್ಟ ಸ್ಥಳದಲ್ಲೇ ದಾಳಿ ಮಾಡಿ ಯಶಸ್ವಿಯಾಗಿ ವಾಪಸ್ ಬಂದಿದ್ದವು, ನಾವು ಅಂದುಕೊಂಡಿದ್ದನ್ನು ಸಾಧಿಸಿದ್ದೇವೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com