ಪುಲ್ವಾಮಾ ದಾಳಿ ಹುತಾತ್ಮ ಯೋಧರ ಕುಟುಂಬಕ್ಕೆ 110 ಕೋಟಿ ದಾನಕ್ಕೆ ಮುಂದಾದ ಹಮೀದ್!

ಮಂಡ್ಯದ ಯೋಧ ಗುರು ಸೇರಿದಂತೆ 44 ಯೋಧರು ಹುತಾತ್ಮರಾಗಿದ್ದರು. ಮಡಿದ ಹುತಾತ್ಮ ಯೋಧರ ಕುಟುಂಬಗಳಿಗೆ ಈಗಾಗಲೇ ದೇಶವೇ ಕಣ್ಣೀರು ಹಾಕಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೋಟಾ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಫೆಬ್ರವರಿ 14ರಂದು ಜೈಷ್ ಇ ಮೊಹಮ್ಮದ್ ಭಾರತೀಯ ಯೋಧರ ಪಡೆ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದರು. ಇದರಲ್ಲಿ ಮಂಡ್ಯದ ಯೋಧ ಗುರು ಸೇರಿದಂತೆ 44 ಯೋಧರು ಹುತಾತ್ಮರಾಗಿದ್ದರು. ಮಡಿದ ಹುತಾತ್ಮ ಯೋಧರ ಕುಟುಂಬಗಳಿಗೆ ಈಗಾಗಲೇ ದೇಶವೇ ಕಣ್ಣೀರು ಹಾಕಿದೆ.
ಹುತಾತ್ಮ ಯೋಧರ ಕುಟುಂಬಕ್ಕೆ ಅದಾಗಲೇ ದೇಶಾದ್ಯಂತ ವ್ಯಾಪಾರಿಗಳು, ರಾಜಕೀಯ ಮುಖಂಡರು, ಬಾಲಿವುಡ್ ಸ್ಟಾರ್ಸ್ ಹಾಗೂ ಕ್ರಿಕೆಟರ್ಸ್ ಸೇರಿ ಅನೇಕರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಇದೀಗ ರಾಜಸ್ಥಾನದ ಕೋಟಾದಲ್ಲಿ ವಾಸವಾಗಿರುವ ಮುರ್ತಾಜಾ ಎ ಹಮೀದ್ ಹುತಾತ್ಮ ಯೋಧರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.
ಮುಂಬೈನ ಸರ್ಕಾರಿ ವಾಣಿಜ್ಯ ಕಾಲೇಜಿನಲ್ಲಿ ಸಂಶೋಧಕರಾಗಿ ಸೇವೆ ಸಲ್ಲಿಸುತ್ತಿರುವ ಮುರ್ತಾಜ್ ಹಮೀದ್ ಈಗಾಗಲೇ ಪ್ರಧಾನಿ ಕಚೇರಿಗೆ ಇ-ಮೇಲ್ ಸಂದೇಶ ರವಾನೆ ಮಾಡಿದ್ದು ಪ್ರಧಾನಿ ಮೋದಿಯವರೊಂದಿಗೆ ಭೇಟಿಯಾಗಿ ಮಾತುಕತೆ ನಡೆಸಲು ಸಮಯವಕಾಶ ಕೇಳಿದ್ದಾರೆ.
110 ಕೋಟಿ ರುಪಾಯಿ ಕಾನೂನು ಬದ್ಧವಾದ ಹಣವನ್ನೇ ಹುತಾತ್ಮ ಯೋಧರ ಕುಟುಂಬಕ್ಕೆ ಹಮೀದ್ ನೀಡಲು ಮುಂದಾಗಿದ್ದಾರೆ. ಮೋದಿ ಜತೆ ಮಾತುಕತೆ ನಡೆಸಿದ ಬಳಿಕ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ಈ ಹಣ ವರ್ಗಾವಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com