ವೈಮಾನಿಕ ದಾಳಿ ವೇಳೆ ರಾಫೆಲ್ ಇದ್ದಿದ್ದರೆ ಪರಿಣಾಮವೇ ಬೇರೆ ಆಗಿರುತ್ತಿತ್ತು: ಪ್ರಧಾನಿ ಮೋದಿ

ವೈಮಾನಿಕ ದಾಳಿ ಹಾಗೂ ರಾಫೆಲ್ ಯುದ್ಧ ವಿಮಾನಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ ಅವರು,....
ನರೇಂದ್ರ ಮೋದಿ
ನರೇಂದ್ರ ಮೋದಿ
ಜಾಮ್ ನಗರ: ಬಾಲಕೋಟ್ ವೈಮಾನಿಕ ದಾಳಿ ಹಾಗೂ ರಾಫೆಲ್ ಯುದ್ಧ ವಿಮಾನಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ ಅವರು, ರಾಫೆಲ್ ಯುದ್ಧ ವಿಮಾನ ಇದ್ದಿದ್ದರೆ ಪರಿಣಾಮವೇ ಬೇರೆ ಆಗಿರುತ್ತಿತ್ತು ಎಂದು ಸೋಮವಾರ ಹೇಳಿದ್ದಾರೆ.
ಇಂದು ಜಾಮ್ ನಗರದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಮತ್ತು ಪಾಕಿಸ್ತಾನದಲ್ಲಿ ಉಗ್ರರ ಮೂಲವನ್ನು ಕಿತ್ತುಹಾಕಲಾಗುವುದು ಎಂದರು.
ಸೂಕ್ತ ಸಮಯಕ್ಕೆ ರಾಫೆಲ್ ಒಪ್ಪಂದ ಪೂರ್ಣಗೊಂಡು, ನಮ್ಮ ಬಳಿ ರಾಫೆಲ್ ಯುದ್ಧ ವಿಮಾನಗಳಿದ್ದರೆ ವೈಮಾನಿಕ ದಾಳಿಯ ಪರಿಣಾಮ ಇನ್ನೂ ವಿಭಿನ್ನವಾಗಿರುತ್ತಿತ್ತು ಎಂದು ನಾನು ಹೇಳಿದ್ದೇನೆ. ಆದರೆ ಇದನ್ನು ಅರ್ಥ ಮಾಡಿಕೊಳ್ಳದ ಪ್ರತಿಪಕ್ಷಗಳು ನಮ್ಮ ವಾಯುಪಡೆಯ ದಾಳಿಯನ್ನೇ ನಾನು ಪ್ರಶ್ನಿಸುತ್ತಿದ್ದೇನೆ ಎಂದು ಬಿಂಬಿಸುತ್ತಿವೆ ಎಂದರು.
ದಯವಿಟ್ಟು ಸಾಮಾನ್ಯ ಪ್ರಜ್ಞೆಯನ್ನು ಬಳಸಿ, ನಾನು ಏನು ಹೇಳಿದ್ದೇನೆ ಅನ್ನುವುದನ್ನು ಅರ್ಥ ಮಾಡಿಕೊಳ್ಳಿ. ರಾಫೆಲ್ ಇದ್ದಿದ್ದರೆ ನಮ್ಮ ಯಾವುದೇ ವಿಮಾನವನ್ನು ಹೊಡೆದುರುಳಿಸಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಅವರು ಯಾರೂ ಜೀವಂತವಾಗಿ ಹೋಗುತ್ತಿರಲಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ.
ಇದೇ ವೇಳೆ ಫೆಬ್ರವರಿ 26ರ ವೈಮಾನಿಕ ದಾಳಿಯ ಸಾಕ್ಷ್ಯ ಕೇಳುತ್ತಿರುವ ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದ ಪ್ರಧಾನಿ, ಭಯೋತ್ಪಾದನೆ ಅಂತ್ಯಗೊಳಿಸುವುದು ನಮ್ಮ ಉದ್ದೇಶ. ಆದರೆ  ಕಾಂಗ್ರೆಸ್‌ ಸೇನಾ ಕಾರ್ಯಾಚರಣೆಯನ್ನು ಅನುಮಾನಿಸುತ್ತಿದೆ. ಅಲ್ಲದೆ ಸೇನೆ ನೀಡಿದ ಮಾಹಿತಿಯ ಬಗ್ಗೆ ಶಂಕಿಸುತ್ತಿದೆ. ಇಡೀ ದೇಶವೇ ಉಗ್ರರ ಮೇಲೆ ನಡೆದ ದಾಳಿಗೆ ಬೆಂಬಲ ಸೂಚಿಸಿದೆ. ಯೋಧರ ಬಲಿದಾನಕ್ಕೆ ಸೂಕ್ತ ಉತ್ತರ ನೀಡಿರುವುದಾಗಿ ಜನ ನಂಬಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com