ಬಂದೂಕು ಹಿಡಿಯಬೇಕಾದ ಕೈಗಳಿಗೆ ಲೇಖನಿ: ಕಾಶ್ಮೀರದ ಸರ್ಕಾರಿ ಶಾಲೆಗೆ ಕಂಪ್ಯೂಟರ್, ಬೆಂಚ್ ನೀಡಿದ ಸೇನೆ!

ಪಾಕಿಸ್ತಾನದ ಮೇಲೆ ಭಾರತೀಯ ವಾಯುಸೇನೆಯ ವಾಯುದಾಳಿ ಬಳಿಕ ಮತ್ತು ಉಗ್ರರ ಹಾವಳಿಯಿಂದಾಗಿ ಮುಚ್ಚಿಹೋಗಿದ್ದ ಗಡಿಭಾಗದ ಶಾಲೆಯೊಂದನ್ನು ಭಾರತೀಯ ಸೇನೆ ಜೀರ್ಣೋದ್ಧಾರ ಮಾಡಿದ್ದು, ಶಾಲೆಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಿ ಸ್ಥಳೀಯ ಶ್ಲಾಘನೆಗೆ ಪಾತ್ರವಾಗಿದೆ.
ಸೇನೆಯಿಂದ ಪುನಾರಂಭವಾದ ಸರ್ಕಾರಿ ಶಾಲೆ
ಸೇನೆಯಿಂದ ಪುನಾರಂಭವಾದ ಸರ್ಕಾರಿ ಶಾಲೆ
ಶ್ರೀನಗರ: ಪಾಕಿಸ್ತಾನದ ಮೇಲೆ ಭಾರತೀಯ ವಾಯುಸೇನೆಯ ವಾಯುದಾಳಿ ಬಳಿಕ ಮತ್ತು ಉಗ್ರರ ಹಾವಳಿಯಿಂದಾಗಿ ಮುಚ್ಚಿಹೋಗಿದ್ದ ಗಡಿಭಾಗದ ಶಾಲೆಯೊಂದನ್ನು ಭಾರತೀಯ ಸೇನೆ ಜೀರ್ಣೋದ್ಧಾರ ಮಾಡಿದ್ದು, ಶಾಲೆಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಿ ಸ್ಥಳೀಯ ಶ್ಲಾಘನೆಗೆ ಪಾತ್ರವಾಗಿದೆ.
ಜಮ್ಮುವಿನ ಸಾಂಬಾ ಸೆಕ್ಟರ್ ನಲ್ಲಿರುವ ಬಾರಿಖಾದಿ ಪ್ರಾಂತ್ಯದ ಸರ್ಕಾರಿ ಶಾಲೆಯನ್ನು ಭಾರತೀಯ ಸೇನೆ ಜೀರ್ಣೋದ್ಧಾರ ಮಾಡಿದ್ದು, ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ನೀಡಿದ್ದು ಮಾತ್ರವಲ್ಲದೇ ತಾನೇ ಮುಂದೆ ನಿಂತು ಶಾಲೆಯ ಪುನಾರಂಭಕ್ಕೆ ಕಾರಣವಾಗಿದೆ.
ಸೇನೆಯ ಆಪರೇಷನ್ ಸದ್ಭಾವನಾ ಯೋಜನೆಯಡಿಯಲ್ಲಿ ಇಲ್ಲಿನ ಸರ್ಕಾರಿ ಶಾಲೆಯ ಕಟ್ಟಡಕ್ಕೆ ಸೇನೆ 4 ಕಂಪ್ಯೂಟರ್ ಗಳು ಮತ್ತು ಅದರ ಪರಿಕರಗಳು, 25 ಬೆಂಚ್ ಡೆಸ್ಕ್ ಗಳು, ಒಂದು ವಾಟರ್ ಟ್ಯಾಂಕ್, ಕೂಲರ್ ಸಹಿತ ಒಂದು ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಸೇನೆ ಶಾಲೆಗೆ ಒದಗಿಸಿದೆ.
ಸೇನೆಯ ಈ ಕಾರ್ಯ ಇದೀಗ ಸ್ಥಳೀಯರಲ್ಲೂ ಖುಷಿ ನೀಡಿದ್ದು, ತಮ್ಮ ಮಕ್ಕಳು ಶಾಲೆಗೆ ತೆರಳಲಾಗದೇ ಪರಿತಪಿಸುತ್ತಿದ್ದರು. ಸೇನೆಯ ಕಾರ್ಯದಿಂದ ಇದೀಗ ತಮ್ಮ ಮಕ್ಕಳೂ ಕೂಡ ಶಾಲೆಗೆ ತೆರಳುವಂತಾಗಿದೆ ಎಂದು ಸೇನೆಗೆ ಧನ್ಯವಾದ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com