300 ಮೊಬೈಲ್ ಗಳನ್ನು ಮರಗಳು ಬಳಸುತ್ತವೆಯೇ?: ಸಿಧು, ದಿಗ್ವಿಜಯ್ ಸಿಂಗ್ ಗೆ ರಾಜನಾಥ್ ಸಿಂಗ್ ತಿರುಗೇಟು

ಬಾಲಾಕೋಟ್ ದಾಳಿಯಲ್ಲಿ ಭಾರತದ ಯುದ್ಧವಿಮಾನಗಳು ಕೇವಲ ಮರಗಿಡಗಳನ್ನು ಉರುಳಿಸಿ ಬಂದಿವೆ ಎಂಬ ಕಾಂಗ್ರೆಸ್ ಮುಖಂಡರ ಆರೋಪಕ್ಕೆ ತಿರುಗೇಟು ನೀಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಮರಗಿಡಗಳು ಮೊಬೈಲ್ ಫೋನ್ ಬಳಸುತ್ತವೆಯೇ ಎಂದು ತಿರುಗೇಟು ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಬಾಲಾಕೋಟ್ ದಾಳಿಯಲ್ಲಿ ಭಾರತದ ಯುದ್ಧವಿಮಾನಗಳು ಕೇವಲ ಮರಗಿಡಗಳನ್ನು ಉರುಳಿಸಿ ಬಂದಿವೆ ಎಂಬ ಕಾಂಗ್ರೆಸ್ ಮುಖಂಡರ ಆರೋಪಕ್ಕೆ ತಿರುಗೇಟು ನೀಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಮರಗಿಡಗಳು ಮೊಬೈಲ್ ಫೋನ್ ಬಳಸುತ್ತವೆಯೇ ಎಂದು ತಿರುಗೇಟು ನೀಡಿದ್ದಾರೆ.
ಪಾಕ್​  ಆಕ್ರಮಿತ ಕಾಶ್ಮೀರ ಬಾಲಾಕೋಟ್ ​ನಲ್ಲಿ ಭಾರತ ವಾಯುಸೇನೆ ನಡೆಸಿದ್ದ ವಾಯುದಾಳಿಯಲ್ಲಿ ಎಷ್ಟು ಮಂದಿ ಉಗ್ರರು ಸತ್ತಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಭುಗಿಲೆದ್ದಿರುವ ವಾದ-ವಿವಾದ ಸಂಬಂಧ ವಿಪಕ್ಷ ನಾಯಕರ ಟೀಕಿಗೆ ಉತ್ತರಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಮರಗಿಡಗಳು ಮೊಬೈಲ್ ಫೋನ್ ಬಳಸುತ್ತವೆಯೇ ಎಂದು ತಿರುಗೇಟು ನೀಡಿದ್ದಾರೆ.
ದೆಹಲಿಯಲ್ಲಿ ಈ ಬಗ್ಗೆ ಮಾತನಾಡಿರುವ ರಾಜನಾಥ್ ಸಿಂಗ್ ಅವರು, 'ಫೆಬ್ರವರಿ 26ರಂದು ಬಾಲಾಕೋಟ್‌ ನಲ್ಲಿ ಜೈಷ್‌ ಶಿಬಿರದ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸುವ ಮುನ್ನ ಅಲ್ಲಿ 300 ಮೊಬೈಲ್‌ ಪೋನ್‌ ಗಳು ಕಾರ್ಯ ಪ್ರವೃತ್ತವಾಗಿದ್ದವು ಎಂದು ಹೇಳಿದ್ದಾರೆ. ಆ ಮೂಲಕ ವಾಯುದಾಳಿಯಲ್ಲಿ ಪರೋಕ್ಷವಾಗಿ 300 ಉಗ್ರರು ಸಾವನ್ನಪ್ಪಿದ್ದಾರೆ ಎಂಬುದನ್ನು ರಾಜನಾಥ್ ಸಿಂಗ್ ಸಮರ್ಥಿಸಿಕೊಂಡಿದ್ದಾರೆ. 
'ಭಾರತ ನಡೆಸಿದ ಬಾಲಾಕೋಟ್ ವಾಯುದಾಳಿಯಲ್ಲಿ ಹತ್ಯೆಗೀಡಾದ ಉಗ್ರರ ಸಂಖ್ಯೆ ಇಂದಲ್ಲ, ನಾಳೆ ಗೊತ್ತಾಗಲಿದೆ. ಜೈಷ್‌ ಇ ಮೊಹಮ್ಮದ್‌ ಉಗ್ರಗಾಮಿ ಸಂಘಟನೆ ತರಬೇತಿ ಶಿಬಿರದ ಮೇಲೆ ವಾಯುಪಡೆ ನಡೆಸಿದ ನಿಖರ ದಾಳಿಯಲ್ಲಿ ಎಷ್ಟು ಜನರು ಸತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ನೀಡುವ ಮಾಹಿತಿಯೊಂದನ್ನು ಎನ್‌ಟಿಆರ್‌ಒ ನೀಡಿದೆ. ಬಾಲಾಕೋಟ್ ನಲ್ಲಿ ದಾಳಿಗೆ ಮುನ್ನ 300 ಮೊಬೈಲ್‌ ಪೋನ್‌ ಗಳು ಸಕ್ರಿವಾಗಿದ್ದವು. ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ(ನ್ಯಾಷನಲ್‌ ಟೆಕ್ನಿಕಲ್‌ ರೀಸರ್ಚ್‌ ಆರ್ಗನೈಜೇಷನ್-ಎನ್‌ಟಿಆರ್‌ಒ) ಈ ಮಾಹಿತಿ ನೀಡಿದೆ. ಇದುವೇ 300 ಉಗ್ರರು ಸತ್ತಿದ್ಧಾರೆ ಎಂಬುದಕ್ಕೆ ಸಾಕ್ಷಿ' ಎಂದಿದ್ದಾರೆ.
ಬಾಲಾಕೋಟ್ ದಾಳಿಯಲ್ಲಿ ಭಾರತದ ಯುದ್ಧವಿಮಾನಗಳು ಕೇವಲ ಮರಗಿಡಗಳನ್ನು ಉರುಳಿಸಿ ಬಂದಿವೆ ಎಂಬ ಆರೋಪಕ್ಕೆ ತಿರುಗೇಟು ನೀಡಿದ ರಾಜನಾಥ್ ಸಿಂಗ್, ಮರಗಿಡಗಳು ಮೊಬೈಲ್ ಫೋನ್ ಬಳಸುತ್ತವೆಯೇ ಎಂದು ಟೀಕಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್ ಮುಖಂಡರಾದ ದಿಗ್ವಿಜಯ್ ಸಿಂಗ್ ಮತ್ತು ಪಂಜಾಬ್ ಕಾಂಗ್ರೆಸ್ ಸರ್ಕಾರದ ಸಚಿವ ನವಜೋತ್ ಸಿಂಗ್ ಸಿಧು ವಾಯುದಾಳಿಯ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com