ಜಮಾತ್-ಇ-ಇಸ್ಲಾಮಿ ಸಂಘಟನೆ ಬೆಂಬಲಿಸಿದರೆ ಮೆಹಬೂಬಾರನ್ನು ಬಂಧಿಸಿ: ಕವಿಂದರ್ ಗುಪ್ತಾ

ನಿಷೇಧಿತ ಜಮಾತ್- ಇ- ಇಸ್ಲಾಮಿ ಸಂಘಟನೆಗೆ ಜಮ್ಮು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಬೆಂಬಲ ನೀಡಿದರೇ ಅವರನ್ನು ಬಂಧಿಸಿ ಎಂದು ಬಿಜೆಪಿ ಮುಖಂಡ
ಕವಿಂದರ್ ಗುಪ್ತಾ
ಕವಿಂದರ್ ಗುಪ್ತಾ
ಜಮ್ಮು: ನಿಷೇಧಿತ ಜಮಾತ್- ಇ- ಇಸ್ಲಾಮಿ ಸಂಘಟನೆಗೆ ಜಮ್ಮು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಬೆಂಬಲ ನೀಡಿದರೇ ಅವರನ್ನು ಬಂಧಿಸಿ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಡಿಸಿಎಂ  ಕವಿಂದರ್ ಗುಪ್ತಾ ಆಗ್ರಹಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತಾಡಿದ ಗುಪ್ತಾ, ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಬಾಂಗ್ಲಾ ದೇಶ, ಆಫ್ಘಾನಿಸ್ತಾನ ಮತ್ತು ಇತರ ದೇಶಗಳು, ಮದ್ರಾಸಗಳನ್ನು ನಿಷೇಧಿಸಿದ್ದಾರೆ, ಒಂದು ವೇಳೆ ಕಾಶ್ಮೀರದಲ್ಲಿ ಮದ್ರಾಸಗಳು ಉಗ್ರವಾದವನ್ನು ಹರಡಲು ಪ್ರಯತ್ನಿಸಿದರೇ ಅಂತಹುಗಳನ್ನು ನಿಷೇಧಿಸಬೇಕು, ಜಮಾತ್ ಇ ಇಸ್ಲಾಮಿ ಗೆ ಬೆಂಬಲ ನೀಡಿದರೇ ಮೆಹಬೂಬ್ ಮಫ್ತಿಯನ್ನು ಬಂಧಿಸಬೇಕು ಎಂದು ಹೇಳಿದ್ದಾರೆ.
ಜಮಾತ್ ಇ ಇಸ್ಲಾಮಿ  ಸಂಘಟನೆ ಬೇರೆ ಉಗ್ರ ಸಂಘಟನೆಗಳ ಜೊತೆ ನಂಟು ಹೊಂದಿದೆ ಎಂಬ ಆರೋಪದ ಮೇಲೆ ಕೇಂದ್ರ ಸರ್ಕಾರ ಜಮಾತ್ ಇ ಇಸ್ಲಾಮಿ ಸಂಘಟನೆ ಮೇಲೆ ನಿಷೇಧ ಹೇರಿತ್ತು,. ಈ ನಿಷೇಧವನ್ನು ವಿರೋಧಿಸಿ ಮಾಜಿ ಸಿಎಂ ಮೆಹಬೂಬ ಮುಫ್ತಿ ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿದ್ದರ ಹಿನ್ನೆಲೆಯಲ್ಲಿ ಕವಿಂದರ್ ಗುಪ್ತ ಈ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com