ಭಾರತೀಯ ವಾಯುಸೇನೆ ಪೈಲೆಟ್‍ಗಳಿಗೆ ಹೊಸ ಹೆಲ್ಮೆಟ್, ವಿಶೇಷತೆ ಏನು ಗೊತ್ತ?

ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ನಂತರ ಭಾರತೀಯ ವಾಯುಸೇನೆಯ ಪರಾಕ್ರಮ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ನಂತರ ಭಾರತೀಯ ವಾಯುಸೇನೆಯ ಪರಾಕ್ರಮ ಜಗತ್ತಿಗೆ ಗೊತ್ತಾಗಿದೆ. ಈ ಮಧ್ಯೆ ವಾಯುಸೇನೆಯ ಪೈಲೆಟ್‍ಗಳಿಗೆ ಇನ್ನು ಹೆಚ್ಚಿನ ಶಕ್ತಿ ತುಂಬುವ ಸಲುವಾಗಿ ಹೊಸ ಹೆಲ್ಮೆಟ್ ಗಳನ್ನು ಸಿದ್ಧಪಡಿಸಲಾಗುತ್ತಿದೆ.
ಈ ಹೊಸ ಹೆಲ್ಮೆಟ್ ನಲ್ಲಿ ಕಾರ್ಯಾಚರಣೆಯ ದೃಶ್ಯಗಳನ್ನು ಕಾಣುವ ಉಪಕರಣ(Helmet Mounted Display System)ವನ್ನು ಭಾರತೀಯ ಸೇನೆಯ ಪೈಲಟ್ ಗಳಿಗೆ ನೀಡಲು ಭಾರತ ಮತ್ತು ಇಸ್ರೇಲ್ ಒಡಂಬಡಿಕೆ ಮಾಡಿಕೊಂಡಿದೆ. 
ನವರತ್ನ ರಕ್ಷಣಾ ಘಟಕ, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಇಸ್ರೇಲ್ ನ ಎಲ್ಬಿಟ್ ಸಿಸ್ಟಮ್ಸ್ ಲಿಮಿಟೆಡ್ ಸಂಸ್ಥೆಗಳು ಬೆಂಗಳೂರಿನಲ್ಲಿ ಫೆಬ್ರವರಿಯಲ್ಲಿ ನಡೆದಿದ್ದ ಏರೋ ಇಂಡಿಯಾ ಸಮಯದಲ್ಲಿ ತಾಂತ್ರಿಕ ಸಹಯೋಗ ಒಪ್ಪಂದ ನಡೆಸಿದ್ದವು. 
ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್ ಗಳ ಪೈಲೆಟ್ ಗಳಿಗೆ ಈ ಹೆಲ್ಮೆಟ್ ಗಳನ್ನು ನೀಡಲಾಗುವುದು. ರಾತ್ರಿಯ ದೃಶ್ಯಗಳನ್ನು ಸ್ಪಷ್ಟವಾಗಿ ಕಾಣುವ ಕನ್ನಡಕಗಳು, ಹಗಲು ಮತ್ತು ರಾತ್ರಿ ಸ್ಪಷ್ಟವಾಗಿ ಗೋಚರಿಸುವ ಡಿಸ್ಪ್ಲೇ 3ಡಿ ಸಿಂಬಾಲಜಿ, ಹೆಡ್ ಟ್ರಾಕಿಂಗ್, ಸೆನ್ಸಾರ್ ಗಳು ಈ ಸುಧಾರಿತ ಹೆಲ್ಮೆಟ್ ನ ವಿಶೇಷತೆ.
ಹೆಚ್ ಎಂಡಿಎಸ್ ಹೆಲ್ಮೆಟ್ ನಲ್ಲಿ ಹೆಲಿಕಾಪ್ಟರ್ ನ ಹಾರಾಟದ ಎತ್ತರ, ಪ್ಲಾಟ್ ಫಾರ್ಮ್ ಮಾಹಿತಿ, ಕಾರ್ಯಾಚರಣೆಯ ಅಂಕಿ ಅಂಶಗಳು, ಎದುರಾಳಿಯ ಮಾಹಿತಿ ಮುಂತಾದ ಸವಲತ್ತುಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com