ಕೋರ್ಟ್ ನ್ನೇ ಟೀಕಿಸಿ ನಾನು ಟ್ವೀಟ್ ಮಾಡಿದ್ದು ತಪ್ಪು: ಪ್ರಶಾಂತ್ ಭೂಷಣ್

ಸಿಬಿಐ ಮಧ್ಯಂತರ ನಿರ್ದೇಶಕರಾಗಿ ನಾಗೇಶ್ವರ್ ರಾವ್ ನೇಮಕದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ವಿರುದ್ಧ ಟೀಕೆ ಮಾಡಿ ಟ್ವೀಟ್ ಮಾಡಿದ್ದು ತಮ್ಮ ತಪ್ಪು ಎಂದು ವಕೀಲ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್
ಕೋರ್ಟ್ ನ್ನೇ ಟೀಕಿಸಿ ನಾನು ಟ್ವೀಟ್ ಮಾಡಿದ್ದು ತಪ್ಪು: ಪ್ರಶಾಂತ್ ಭೂಷಣ್
ಕೋರ್ಟ್ ನ್ನೇ ಟೀಕಿಸಿ ನಾನು ಟ್ವೀಟ್ ಮಾಡಿದ್ದು ತಪ್ಪು: ಪ್ರಶಾಂತ್ ಭೂಷಣ್
ನವದೆಹಲಿ: ಸಿಬಿಐ ಮಧ್ಯಂತರ ನಿರ್ದೇಶಕರಾಗಿ ನಾಗೇಶ್ವರ್ ರಾವ್ ನೇಮಕದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ವಿರುದ್ಧ ಟೀಕೆ ಮಾಡಿ ಟ್ವೀಟ್ ಮಾಡಿದ್ದು ತಮ್ಮ ತಪ್ಪು ಎಂದು ವಕೀಲ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಒಪ್ಪಿಕೊಂಡಿದ್ದಾರೆ. 
ಕೋರ್ಟ್ ನ್ನೇ ಟೀಕಿಸಿ, ನಿಂದನಾತ್ಮಕ ಟ್ವೀಟ್ ಮಾಡಿದ್ದ ಪ್ರಶಾಂತ್ ಭೂಷಣ್ ವಿರುದ್ಧ ಕೋರ್ಟ್ ಹಾಗೂ ಕೇಂದ್ರ ಸರ್ಕಾರ ಎರಡೂ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿತ್ತು.
ಪ್ರಶಾಂತ್ ಭೂಷಣ್ ಸರ್ಕಾರದ ವಿರುದ್ಧವೂ ಸಹ ಸುಳ್ಳು, ತಿರುಚಿದ ದಾಖಲೆಗಳನ್ನು ಕೋರ್ಟ್ ಗೆ ನೀಡಲಾಗಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವೂ ಪ್ರಶಾಂತ್ ಭೂಷಣ್ ವಿರುದ್ಧ ಪ್ರಕರಣ ದಾಖಲಿಸಿತ್ತು. ಈಗ ಪ್ರಶಾಂತ್ ಭೂಷಣ್ ತಪ್ಪೊಪ್ಪಿಗೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಪ್ರಶಾಂತ್ ಭೂಷಣ್ ವಿರುದ್ಧ ಪ್ರಕರಣವನ್ನು ಹಿಂಪಡೆಯುವುದಾಗಿ ಕೋರ್ಟ್ ಗೆ ತಿಳಿಸಿದ್ದಾರೆ. 
ಇದೇ ವೇಳೆ ಕೆಕೆ ವೇಣುಗೋಪಾಲ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯ ಪೀಠದಿಂದ ನ್ಯಾ. ಅರುಣ್ ಮಿಶ್ರಾ ಅವರನ್ನು ದೂರವಿಡಬೇಕೆಂದು ಭೂಷಣ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ರೀತಿ ಅರ್ಜಿ ಸಲ್ಲಿಸಿರುವುದಕ್ಕಾಗಿ ತಾವು ಬೇಷರತ್ ಕ್ಷಮೆ ಕೋರುವುದಿಲ್ಲ ಎಂದು ಪ್ರಶಾಂತ್ ಭೂಷಣ್ ಸ್ಪಷ್ಟವಾಗಿ ತಿಳಿಸಿದ್ದಾರೆ. 
ಕೇಂದ್ರ ಸರ್ಕಾರ ಪ್ರಶಾಂತ್ ಭೂಷಣ್ ವಿರುದ್ಧದ ಪ್ರಕರಣವನ್ನು ಹಿಂಪಡೆಯುವುದಾಗಿ ಹೇಳಿದ್ದರೂ ಸಹ ಕೋರ್ಟ್ ಮಾತ್ರ ಈ ಪ್ರಕರಣದ ವಿಚಾರಣೆಯನ್ನು ಮುಂದುವರೆಸುವುದಾಗಿ ಹೇಳಿದ್ದು ಏ.03 ಕ್ಕೆ ವಿಚಾರಣೆ ಮುಂದೂಡಿದೆ. 
ಸಾರ್ವಜನಿಕ ಅಭಿಪ್ರಾಯದ ಮೇಲೆ ಪ್ರಭಾವ ಬೀರುವಂತೆ ವಕೀಲರು ಅಥವಾ ಇನ್ನಾವುದೇ ವ್ಯಕ್ತಿ ನ್ಯಾಯಾಂಗವನ್ನು ಟೀಕಿಸುವುದು ನ್ಯಾಯಾಂಗ ನಿಂದನೆಯಾಗುವುದೇ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಸುಪ್ರೀಂ ಕೋರ್ಟ್ ಪ್ರಶಾಂತ್ ಭೂಷಣ್ ಪ್ರಕರಣದ ವಿಚಾರಣೆ ನಡೆಸುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com