ರಾಹುಲ್ ಗಾಂಧಿ ರಾಫೆಲ್ ಸ್ಪರ್ಧಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ: ರವಿಶಂಕರ್ ಪ್ರಸಾದ್
ರಾಹುಲ್ ಗಾಂಧಿ ರಾಫೆಲ್ ಸ್ಪರ್ಧಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ: ರವಿಶಂಕರ್ ಪ್ರಸಾದ್

ರಾಹುಲ್ ಗಾಂಧಿ ರಾಫೆಲ್ ಸ್ಪರ್ಧಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ: ರವಿಶಂಕರ್ ಪ್ರಸಾದ್

ರಾಫೆಲ್ ಜೆಟ್ ಖರೀದಿ ವಿಷಯದಲ್ಲಿ ರಾಹುಲ್ ಗಾಂಧಿ ಸುಳ್ಳುಗಳನ್ನು ಹಬ್ಬಿಸುತ್ತಿದ್ದು, ರಾಫೆಲ್ ಸ್ಪರ್ಧಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ.
ನವದೆಹಲಿ: ರಾಫೆಲ್ ಜೆಟ್ ಖರೀದಿ ವಿಷಯದಲ್ಲಿ ರಾಹುಲ್ ಗಾಂಧಿ ಸುಳ್ಳುಗಳನ್ನು ಹಬ್ಬಿಸುತ್ತಿದ್ದು, ರಾಫೆಲ್ ಸ್ಪರ್ಧಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ. 
ರಾಹುಲ್ ಗಾಂಧಿ ಉದ್ದೇಶಪೂರ್ವಕವಾಗಿ ರಾಫೆಲ್ ನ ಸ್ಪರ್ಧಿಗಳ ಕೈಗೊಂಬೆಯಂತೆ, ಅವರ ತಾಳಕ್ಕೆ ಕುಣಿಯುತ್ತಿದ್ದು ರಾಫೆಲ್ ಕುರಿತಂತೆ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಇದರಿಂದಾಗಿ ಸೇನಾ ಪಡೆಗಳ ನೈತಿಕ ಸ್ಥೈರ್ಯ ಕುಸಿಯುತ್ತದೆ ಎಂದು ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ. 
ರಾಹುಲ್ ಗಾಂಧಿ ಭಾರತೀಯ ವಾಯುಪಡೆಯನ್ನು ನಂಬುವುದಿಲ್ಲ, ಸುಪ್ರೀಂ ಕೋರ್ಟ್ ನ್ನು ನಂಬುವುದಿಲ್ಲ. ಸಿಎಜಿಯನ್ನು ನಂಬುವುದಿಲ್ಲ. ಹಾಗಾದರೆ ಪಾಕಿಸ್ತಾನವನ್ನು ನಂಬುತ್ತಾರಾ? ಅಜಾಗರೂಕತೆಯಿಂದಲೋ ಉದ್ದೇಶಪೂರ್ವಕವಾಗಿಯೋ ರಾಹುಲ್ ಗಾಂಧಿ ರಾಫೆಲ್ ಜೆಟ್ ಸ್ಪರ್ಧಿಗಳ ತಾಳಕ್ಕೆ ಕುಣಿಯುತ್ತಿದ್ದಾರೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com