ಪ್ರಧಾನಿ ಮೋದಿ ವಿರುದ್ಧ ಎಫ್ಐಆರ್ ದಾಖಲಿಸುವ ಸಮಯ ಬಂದಿದೆ: ರಾಹುಲ್ ಗಾಂಧಿ

ರಫೇಲ್ ಯುದ್ಧ ವಿಮಾನ ಒಪ್ಪಂದದ ಎಲ್ಲ ವ್ಯವಹಾರಗಳನ್ನು ಪ್ರಧಾನಿ ಕಾರ್ಯಾಲಯವೇ ನೋಡಿಕೊಂಡಿದ್ದು ಇದೀಗ ಅದರ ದಾಖಲೆ ನಾಪತ್ತೆಯಾಗಿದೆ ಎನ್ನುವ...
ನರೇಂದ್ರ ಮೋದಿ-ರಾಹುಲ್ ಗಾಂಧಿ
ನರೇಂದ್ರ ಮೋದಿ-ರಾಹುಲ್ ಗಾಂಧಿ
ನವದೆಹಲಿ: ರಫೇಲ್ ಯುದ್ಧ ವಿಮಾನ ಒಪ್ಪಂದದ ಎಲ್ಲ ವ್ಯವಹಾರಗಳನ್ನು ಪ್ರಧಾನಿ ಕಾರ್ಯಾಲಯವೇ ನೋಡಿಕೊಂಡಿದ್ದು ಇದೀಗ ಅದರ ದಾಖಲೆ ನಾಪತ್ತೆಯಾಗಿದೆ ಎನ್ನುವ ಮೂಲಕ ಸರ್ಕಾರ ಹಗರಣವನ್ನು ಒಪ್ಪಿಕೊಂಡಿದೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಫ್ಐಆರ್ ದಾಖಲಿಸಬೇಕಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಪ್ರಧಾನಿ ಮೋದಿ ಬಳಿ ತಮ್ಮನ್ನು ಸಾಬೀತುಪಡಿಸಿಕೊಳ್ಳಲು ಯಾವುದೇ ಸಾಕ್ಷ್ಯಾಧಾರವಿಲ್ಲ. ರಫೇಲ್ ಹಗರಣ ಮೋದಿಯೊಂದಿಗೆ ಶುರುವಾಗಿ ಮೋದಿಯೊಂದಿಗೆ ಕೊನೆಗೊಳ್ಳಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳು ರಕ್ಷಣಾ ಸಚಿವಾಲಯದಿಂದಲೇ ಕಳುವಾಗಿದೆ. ಈ ಕುರಿತು ನಾವು ಸದ್ಯದಲ್ಲೇ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿತ್ತು.
ಇಲಾಖೆಯ ಮಾಜಿ ಅಥವಾ ಹಾಲಿ ಅಧಿಕಾರಿಗಳೇ ಈ ದಾಖಲೆಗಳನ್ನು ಕದ್ದಿರಬಹುದು, ನಾವೀಗಾಗಲೇ ಈ ಸಂಬಂಧ ತನಿಖೆ ನಡೆಸುತ್ತಿದ್ದೇವೆ ಎಂದು ಕೇಂದ್ರದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಸುಪ್ರೀಂ ಕೋರ್ಟ್ ನಲ್ಲಿ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com