ಕಾಶ್ಮೀರಿಗಳು ನಮ್ಮವರು, ನಮ್ಮೊಂದಿಗೆಯೇ ಇರುತ್ತಾರೆ: ರಾಜನಾಥ್ ಸಿಂಗ್

ಕಾಶ್ಮೀರಿಗಳು ನಮ್ಮವರು ಆಗಿದ್ದಾರೆ. ನಮ್ಮೊಂದಿಗೆಯೇ ಸದಾ ಕಾಲ ಇರುತ್ತಾರೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್

ರಾಜಸ್ತಾನ: ಕಾಶ್ಮೀರಿಗಳು ನಮ್ಮವರು ಆಗಿದ್ದಾರೆ. ನಮ್ಮೊಂದಿಗೆಯೇ ಸದಾ ಕಾಲ ಇರುತ್ತಾರೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಬೀವರ್ ನಲ್ಲಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಡೀ ದೇಶದ ಜನರಿಗೆ ಸಂದೇಶ ನೀಡಲು ಬಯಸುತ್ತೇನೆ.ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಕೆಲ ಹಲ್ಲೆ ಪ್ರಕರಣಗಳನ್ನು ಕೇಳಿದ್ದೇನೆ. ಕಾಶ್ಮೀರಿಗಳು, ನಮ್ಮವರು, ನಮ್ಮೊಂದಿಗೆಯೇ ಇರುತ್ತಾರೆ. ಕಾಶ್ಮೀರಿ ವಿದ್ಯಾರ್ಥಿಗಳು ಪ್ರೀತಿಸಿ ರಕ್ಷಿಸುವಂತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಳ್ಳುವುದಾಗಿ ಹೇಳಿದರು.

ಪುಲ್ವಾಮಾ  ಉಗ್ರ ದಾಳಿಯ ನಂತರ ದೇಶದ ಹಲವೆಡೆ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದ ಪ್ರಕರಣಗಳು  ವರದಿಯಾಗುತ್ತಿದ್ದು, ಲಖನೌದಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು  ಡ್ರೈ ಪ್ರೂಟ್ ಮಾರಾಟ ಮಾಡುತ್ತಿದ್ದ ಇಬ್ಬರು ಕಾಶ್ಮೀರಿಗಳ ಮೇಲೆ ಹಲ್ಲೆ ನಡೆಸಿದ್ದರು. ಈ ಪ್ರಕರಣ ಸಂಬಂಧ ನಾಲ್ವರನ್ನು ಗುರುವಾರ ಪೊಲೀಸರು ಬಂಧಿಸಿದ್ದರು.

ಕಾಶ್ಮೀರಿ ವ್ಯಾಪಾರಿಗಳ ಮೇಲಿನ ಹಲ್ಲೆ ಪ್ರಕರಣ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಘಟನೆಯನ್ನು ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಹಾಗೂ ಒಮರ್ ಅಬ್ದುಲ್ಲಾ ತೀವ್ರವಾಗಿ ಖಂಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com