ಬದರಿನಾಥ, ಕೇದಾರನಾಥ ದೇಗುಲ ಸಮಿತಿಗೆ ಅನಂತ್ ಅಂಬಾನಿ ನೇಮಕ!

ಪ್ರಸಿದ್ಧ ತೀರ್ಥ ಕ್ಷೇತ್ರ ಬದರಿನಾಥ, ಕೇದಾರನಾಥ​ ದೇಗುಲ ಸಮಿತಿಗೆ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್​ಅವರು ಉದ್ಯಮಿ ಮುಖೇಶ್ ಅಂಬಾನಿ ...

Published: 08th March 2019 12:00 PM  |   Last Updated: 08th March 2019 11:53 AM   |  A+A-


Anant Ambani

ಅನಂತ್ ಅಂಬಾನಿ

Posted By : SD SD
Source : ANI
ಡೆಹ್ರಾಡೂನ್: ಪ್ರಸಿದ್ಧ ತೀರ್ಥ ಕ್ಷೇತ್ರ ಬದರಿನಾಥ, ಕೇದಾರನಾಥ​ ದೇಗುಲ ಸಮಿತಿಗೆ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್​ಅವರು ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್​ ಅಂಬಾನಿ ಅವರನ್ನು ನೇಮಕ ಮಾಡಿದ್ದಾರೆ. 

ಮುಖೇಶ್​ಅಂಬಾನಿ ಕುಟುಂಬವು ಬದರಿನಾಥ ಮತ್ತು ಕೇದಾರನಾಥ ದೇಗುಲಕ್ಕೆ ನಿಯಮಿತವಾಗಿ ಭೇಟಿ ನೀಡುವ ಸಂಪ್ರದಾಯ ಹೊಂದಿದೆ. ಅಲ್ಲದೆ, ಕೇದಾರನಾಥ ಮತ್ತು ಬದರಿನಾಥ ದೇಗುಲಗಳ ಪುನರ್​ ನವೀಕರಣ ಕಾರ್ಯದಲ್ಲಿ ತಾವೂ ಭಾಗಿಯಾಗುವುದಾಗಿ ದೇಗುಲ ಸಮಿತಿಗೆ ಎರಡು ವರ್ಷಗಳ ಹಿಂದೆ ಮುಖೇಶ್​ಪ್ರಸ್ತಾವ ನೀಡಿದ್ದರು. 

ತಮ್ಮ ಕುಟುಂಬದಲ್ಲಿ ಯಾವುದಾದರೂ ಮಹತ್ತರ ಬೆಳವಣಿಗೆ ನಡೆಯುವುದಕ್ಕೂ ಮೊದಲು ದೇಗುಲಕ್ಕೆ ಭೇಟಿ ನೀಡುವುದನ್ನು ಮುಖೇಶ್​ ರೂಢಿಯಾಗಿಟ್ಟುಕೊಂಡಿದ್ದಾರೆ. ತಮ್ಮ ಪುತ್ರಿಯ ವಿವಾಹಕ್ಕೂ ಮೊದಲು ದೇಗುಲಕ್ಕೆ ಬಂದಿದ್ದ ಅವರು, ಆಶೀರ್ವಾದ ಪಡೆದು ಹೋಗಿದ್ದರು. ನಂತರ, ಆಹ್ವಾನ ಪತ್ರಿಕೆಯನ್ನು ಮೊದಲು ದೇಗುಲಕ್ಕೇ ಸಮರ್ಪಿಸಿದ್ದರು. 

ಕೇದಾರನಾಥ ದೇವಾಲಯ ಶಿವನ ದೇವಾಲಯವಾಗಿದೆ, ಮಂದಾಕಿನಿ ನದಿಯ ಹಿಮಾಲಯ ಪ್ರದೇಶದಲ್ಲಿ ಈ ದೇವಾಲಯ ಸ್ಥಾಪಿತವಾಗಿದೆ. ಕೇದಾರನಾಥ ದೇವಾಲಯ ಉತ್ತಾರಖಂಡ್ ನಲ್ಲಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp