ಪ್ರಧಾನಿ ಮೋದಿ ಡಿಸ್ಲೆಕ್ಸಿಯಾ ಹೇಳಿಕೆ: ದೂರಿನ ಕುರಿತು ಕಾನೂನು ಸಲಹೆ ಪಡೆಯಲಿರುವ ಪೊಲೀಸರು

ಡಿಸ್ನೆಕ್ಸಿಯಾ ಪೀಡಿತ ಮಕ್ಕಳ ಬಗ್ಗೆ ಹೇಳಿಕೆ ನೀಡಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸರ್ಕಾರೇತರ...
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಚೆನ್ನೈ: ಡಿಸ್ನೆಕ್ಸಿಯಾ ಪೀಡಿತ ಮಕ್ಕಳ ಬಗ್ಗೆ ಹೇಳಿಕೆ ನೀಡಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸರ್ಕಾರೇತರ ಸಂಘಟನೆಯೊಂದು ನೀಡಿರುವ ದೂರಿಗೆ ಸಂಬಂಧಪಟ್ಟಂತೆ ಚೆನ್ನೈಯ ಸೈದಪೆಟ್ ಪೊಲೀಸ್ ಠಾಣೆಯ ಪೊಲೀಸರು ಇನ್ನೂ ಕೇಸು ದಾಖಲಿಸಿಕೊಂಡಿಲ್ಲ. ಕಾನೂನು ಸಲಹೆ ಪಡೆದು ಕೇಸು ದಾಖಲಿಸಬೇಕೆ, ಬೇಡವೆ ಎಂಬ ಬಗ್ಗೆ ನಿರ್ಧರಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಅರ್ಜಿಯಲ್ಲಿ, ಇಂತಹ ಹೇಳಿಕೆ ನೀಡಿ ಕ್ಷಮೆ ಕೇಳದಿರುವ  ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಕಳೆದ ಮಾರ್ಚ್ 2ರಂದು ಖಾರಾಗ್ ಪುರದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ವಿದ್ಯಾರ್ಥಿಯೊಬ್ಬ ಡಿಸ್ಲೆಕ್ಸಿಯಾ ಮಕ್ಕಳ ಮೇಲೆ ಮಾಡಿರುವ ಪ್ರಾಜೆಕ್ಟ್ ನ್ನು ವಿವರಿಸುವಾಗ 4--50 ವರ್ಷವಾದ ಮಕ್ಕಳಿಗೆ ಸಹ ಇದು ಸಹಾಯವಾಗುತ್ತದೆಯೇ ಎಂದು ಪ್ರಶ್ನೆ ಮಾಡಿದ್ದರು. ಅಂದರೆ ಪ್ರಧಾನಿ ಮೋದಿ ಪರೋಕ್ಷವಾಗಿ ರಾಹುಲ್ ಗಾಂಧಿಯನ್ನು ಟೀಕಿಸಿದ್ದಾರೆ ಎಂದು ವ್ಯಾಪಕವಾಗಿ ಟೀಕೆಗಳು ಕೇಳಿಬಂದವು,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com