ಲೋಕಾ ಸಮರ: ಕೈ ಮೊದಲ ಪಟ್ಟಿಯಲ್ಲಿ ಸೋನಿಯಾ, ರಾಹುಲ್ ಗಾಂಧಿಗೆ ಟಿಕೆಟ್, ಪ್ರಿಯಾಂಕಾ ಹೆಸರು ಇಲ್ಲ!

ಕಾಂಗ್ರೆಸ್ ಪಕ್ಷ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ನಿರೀಕ್ಷೆಯಂತೆಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಗಾಂಧಿ ಅವರ ಹೆಸರಿದ್ದು, ಅಚ್ಚರಿ ಎಂದರೆ ಈ ಪಟ್ಟಿಯಲ್ಲಿ ಪ್ರಿಯಾಂಕಾ ವಾದ್ರಾ ಅವರ ಹೆಸರು ನಾಪತ್ತೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಲೋಕಸಭಾ ಚುನಾವಣೆಗೆ ಸಕಲ ರೀತಿಯಲ್ಲೂ ಸಜ್ಜಾಗಿರುವ ಕಾಂಗ್ರೆಸ್ ಪಕ್ಷ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ನಿರೀಕ್ಷೆಯಂತೆಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಗಾಂಧಿ ಅವರ ಹೆಸರಿದ್ದು, ಅಚ್ಚರಿ ಎಂದರೆ ಈ ಪಟ್ಟಿಯಲ್ಲಿ ಪ್ರಿಯಾಂಕಾ ವಾದ್ರಾ ಅವರ ಹೆಸರು ನಾಪತ್ತೆಯಾಗಿದೆ.
ಇತ್ತೀಚೆಗಷ್ಟೇ ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ಪ್ರಿಯಾಂಕಾ ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ನಿನ್ನೆ ಬಿಡುಗಡೆಯಾಗಿರುವ ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿಯಲ್ಲಿ ಅವರ ಹೆಸರು ನಾಪತ್ತೆಯಾಗುವ ಮೂಲಕ ಸ್ವತಃ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಚ್ಚರಿ ತಂದಿದೆ.
ಮತ್ತೊಂದು ಪ್ರಮುಖ ವಿಚಾರವೆಂದರೆ, ರಾಯ್ ಬರೇಲಿ ಕ್ಷೇತ್ರದಿಂದ ಈ ಬಾರಿ ಸೋನಿಯಾ ಗಾಂಧಿ ಸ್ಪರ್ಧಿಸುವುದಿಲ್ಲ ಎಂಬ ವದಂತಿಗಳು ಹಬ್ಬಿತ್ತು. ಈ ಹಿಂದಿನ ಸಾಕಷ್ಟು ಸಭೆಗಳಲ್ಲಿ ಸೋನಿಯಾ ಗಾಂಧಿ ಅವರೇ ತಾವು ನಿವೃತ್ತಿಯಾಗಿದ್ದು, ಪಕ್ಷದ ಸಂಪೂರ್ಣ ಹೊಣೆಗಾರಿಕೆ ರಾಹುಲ್ ಗಾಂಧಿಯದ್ದು ಎಂದು ಹೇಳುವ ಮೂಲಕ ತಾನು ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿರುವುದಾಗಿ ಪರೋಕ್ಷವಾಗಿ ಹೇಳಿದ್ದರು. ಅನಾರೋಗ್ಯದಿಂದ ಬಳಲುತ್ತಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎನ್ನಲಾಗಿತ್ತು. 
ಅವರ ಬದಲಾಗಿ ರಾಯ್ ಬರೇಲಿಯಿಂದ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು.ಆದರೆ ಸೋನಿಯಾ ಗಾಂಧಿ ಅವರೇ ರಾಯ್ ಬರೇಲಿಯಿಂದ ಚುನಾವಣಾ ಕಣಕ್ಕಿಳಿದಿದ್ದು, ನಿನ್ನೆ ಕಾಂಗ್ರೆಸ್ ಘೋಷಣೆ ಮಾಡಿರುವ ಮೊದಲ ಪಟ್ಟಿಯಲ್ಲಿ ಸೋನಿಯಾ ಅವರಿಗೆ ಟಿಕೆಟ್ ನೀಡಲಾಗಿದ್ದು. ಇದು ಕಾರ್ಯಕರ್ತರಲ್ಲಿ ಅಚ್ಚರಿಯೊಂದಿಗೆ ಹೊಸ ಹುಮ್ಮಸ್ಸು ಕೂಡ ನೀಡಿದೆ. ಅಂತೆಯೇ ಪ್ರಿಯಾಂಕಾ ಗಾಂಧಿ ಅವರು ಬೇರೊಂದು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಬಹುದು ಎನ್ನಲಾಗಿದೆ.
ಕಾಂಗ್ರೆಸ್ ನ ಈ ಪಟ್ಟಿಯಲ್ಲಿ ಉತ್ತರ ಪ್ರದೇಶದಲ್ಲಿ 11 ಅಭ್ಯರ್ಥಿಗಳನ್ನು ಘೋಷಿಸಿದ್ದರೆ, ಗುಜರಾತಿನ 4 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ. ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳು ಕಾಂಗ್ರೆಸ್ ನಲ್ಲಿ ಮೈತ್ರಿ ಮಾಡಿಕೊಂಡ ನಂತರ ಒಂಟಿಯಾಗಿಯೇ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ನಿರ್ಧರಿಸಿದೆ.
15 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳು:
ಉತ್ತರಪ್ರದೇಶದ  ರಾಯ್ ಬರೇಲಿ- ಸೋನಿಯಾ ಗಾಂಧಿ
ಅಮೇಥಿ- ರಾಹುಲ್ ಗಾಂಧಿ
ಫರುಖಾಬಾದ್- ಸಲ್ಮಾನ್ ಖುರ್ಷಿದ್
ಖುಷಿ ನಗರ್​- ಆರ್​ಪಿಎನ್ ಸಿಂಗ್
ಧೌರಾಹ್ರಾ- ಜತಿನ್ ಪ್ರಸಾದ್
ಸಹರಾನ್​ಪುರ- ಇಮ್ರಾನ್ ಮಸೂದ್​
ಬದೌನ್- ಸಲೀಂ ಇಕ್ಬಾಲ್ ಶೇರ್ವಾನಿ
ಉನ್ನಾವ್​- ಅನು ಟಂಡನ್
ಅಕ್ಬರ್​ಪುರ್​- ರಾಜಾರಾಂ ಪಾಲ್
ಜಲೌನ್- ಬ್ರಿಜ್ ಲಾಲ್ ಕಬೀರ್
ಫೈಜಾಬಾದ್​- ನಿರ್ಮಲ್ ಖಾತ್ರಿ
ಗುಜರಾತ್​ನ ಅಹಮದಾಬಾದ್-  ರಾಜು ಪಾರ್ಮರ್
ವಡೋದರ- ಪ್ರಶಾಂತ್​ ಪಟೇಲ್
ಚೋಟಾ ಉದಯಪುರ್- ರಂಜಿತ್​ ಮೋಹನ್ ಸಿನ್ಹಾ ರಾವತ್​
ಆನಂದ್​- ಭರತ್ ಸಿನ್ಹಾ ಎಂ. ಸೋಲಂಕಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com