ಶ್ರೀ ಶ್ರೀ ರವಿಶಂಕರ್ ಗುರೂಜಿ ಏಕಪಕ್ಷೀಯ: ಅಯೋಧ್ಯೆ ಸಂಧಾನ ಸಮಿತಿಯಲ್ಲಿ ಸ್ಥಾನಕ್ಕೆ ಒವೈಸಿ ಆಕ್ಷೇಪ

ರಾಮ ಜನ್ಮಭೂಮಿ -ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೇಮಿಸಿರುವ ತ್ರಿ ಸದಸ್ಯ ಸಮಿತಿಯಲ್ಲಿ ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ ಅವರನ್ನು ನೇಮಿಸಿರುವುದಕ್ಕೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಸಾದುದ್ದೀನ್  ಓವೈಸಿ
ಅಸಾದುದ್ದೀನ್ ಓವೈಸಿ
ನವದೆಹಲಿ: ರಾಮ ಜನ್ಮಭೂಮಿ -ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೇಮಿಸಿರುವ ತ್ರಿ ಸದಸ್ಯ ಸಮಿತಿಯಲ್ಲಿ ಆರ್ಟ್ ಆಫ್ ಲಿವಿಂಗ್ ನ  ರವಿಶಂಕರ್  ಗುರೂಜಿ ಅವರನ್ನು ನೇಮಿಸಿರುವುದಕ್ಕೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್  ಓವೈಸಿ  ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಯೋಧ್ಯೆಯ ಮೇಲೆ ಮುಸ್ಲಿಮರು ತಮ್ಮ ವಾದವನ್ನು ಬಿಟ್ಟುಕೊಡದಿದ್ದರೆ ಭಾರತ ಸಿರಿಯಾವಾಗಿ ಮಾರ್ಪಡುತ್ತಿದೆ ಎಂದು ರವಿಶಂಕರ್  ಶ್ರೀ ಈ ಹಿಂದೆ ಹೇಳಿಕೆ ನೀಡಿದ್ದರು. ಇದು ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು. ಆದ್ದರಿಂದ ತಟಸ್ಥರಾಗಿರುವವರನ್ನು ಸಂದಾನ ಸಮಿತಿಯಲ್ಲಿ ಸುಪ್ರೀಂಕೋರ್ಟ್ ನೇಮಿಸಿದರೆ ಉತ್ತಮವಾಗುತ್ತದೆ ಎಂದು ಓವೈಸಿ ಹೇಳಿದ್ದಾರೆ.
ರಾಮ ಜನ್ಮಭೂಮಿ -ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್  ನೇಮಿಸಿರುವ ತ್ರಿ ಸದಸ್ಯ ಸಮಿತಿಯಲ್ಲಿ ಆರ್ಟ್ ಆಫ್ ಲಿವಿಂಗ್ ನ  ರವಿಶಂಕರ್  ಗುರೂಜಿ ಸಹ ಸದಸ್ಯರಾಗಿದ್ದು, ಧೀರ್ಘ ಕಾಲದಿಂದ ನೆನೆಗುದಿಗೆ ಬಿದ್ದಿರುವ ಈ ಪ್ರಕರಣಕ್ಕೆ ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸುವಂತೆ  ಸುಪ್ರೀಂಕೋರ್ಟ್ ಸೂಚಿಸಿದೆ.
ಈ ಸಮಿತಿಗೆ ನಿವೃತ್ತ ನ್ಯಾಯಮೂರ್ತಿ ಖಲೀಪುಲ್ಲಾ ಅವರು ಅಧ್ಯಕ್ಷರಾಗಿದ್ದು, ಹಿರಿಯ ವಕೀಲ ಶ್ರೀರಾಮ ಪಂಚು ಹಾಗೂ  ಶ್ರೀ ಶ್ರೀ ರವಿಶಂಕರ್ ಸಂಧಾನ ಸಮಿತಿಯಲ್ಲಿರಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಸಮಾಜದಲ್ಲಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳುವ ಮೂಲಕ  ದೀರ್ಘಕಾಲದ ಘರ್ಷಣೆಯನ್ನು ಅಂತ್ಯಗೊಳಿಸಲು ನಾವು ಎಲ್ಲರೂ ಒಟ್ಟಿಗೆ ಹೋಗಬೇಕು ಎಂದು ರವಿಶಂಕರ್ ಶ್ರೀ ಟ್ವೀಟ್ ಮಾಡಿದ್ದಾರೆ.
ಸಂಧಾನ ಪ್ರಕ್ರಿಯೆ ನಾಲ್ಕು ವಾರಗಳ ಒಳಗೆ ಆರಂಭಗೊಂಡು ಎಂಟು ವಾರಗಳ ಒಳಗೆ ಪೂರ್ಣಗೊಳ್ಳಬೇಕು,ನಾಲ್ಕು ವಾರಗಳ ಒಳಗೆ ಸಂಧಾನ ಸಮಿತಿಯು ಮೊದಲ ವರದಿ ಸಲ್ಲಿಸಬೇಕು, ಸಂಧಾನಕಾರರಿಗೆ ಉತ್ತರ ಪ್ರದೇಶ ಸರ್ಕಾರ ಎಲ್ಲ ಸೌಲಭ್ಯ ಒದಗಿಸಬೇಕು, ಅಗತ್ಯವೆನಿಸಿದ್ದಲ್ಲಿ ಸಂಧಾನಕಾರರು ಹೆಚ್ಚಿನ ಕಾನೂನು ಸಹಕಾರ ಪಡೆಯಬಹುದು ಎಂದು ಪೀಠ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com