ಸಂಧಾನ ಸಮಿತಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ: ಜಫರ್ಯಾಬ್ ಜಿಲಾನಿ

ಬಾಬ್ರಿ ಮಸೀದಿ ಭೂ ವಿವಾದ ಸಂಬಂಧ ನೇಮಕವಾಗಿರುವ ಸಂಧಾನ ಸಮಿತಿಗೆ ತಾವು ಸಂಪೂರ್ಣ ಸಹಕಾರ ನೀಡುವುದಾಗಿ ಎಐಎಂಪಿಎಲ್ ಬಿ ಮುಖ್ಯಸ್ಥ ಹಾಗೂ ಬಾಬ್ರಿ ಮಸೀದಿ ಆ್ಯಕ್ಷನ್ ಕಮಿಟಿ ವಕ್ತಾರ ಜಫರ್ಯಾಬ್ ಜಿಲಾನಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಬಾಬ್ರಿ ಮಸೀದಿ ಭೂ ವಿವಾದ ಸಂಬಂಧ ನೇಮಕವಾಗಿರುವ ಸಂಧಾನ ಸಮಿತಿಗೆ ತಾವು ಸಂಪೂರ್ಣ ಸಹಕಾರ ನೀಡುವುದಾಗಿ ಎಐಎಂಪಿಎಲ್ ಬಿ ಮುಖ್ಯಸ್ಥ ಹಾಗೂ ಬಾಬ್ರಿ ಮಸೀದಿ ಆ್ಯಕ್ಷನ್ ಕಮಿಟಿ ವಕ್ತಾರ  ಜಫರ್ಯಾಬ್ ಜಿಲಾನಿ ಹೇಳಿದ್ದಾರೆ.
ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಅವರು, ಈ ಹಿಂದೆಯೇ ಸುಪ್ರೀಂ ಕೋರ್ಟ್ ಸಂಧಾನ ಪ್ರಕ್ರಿಯೆಗೆ ತಾವು ಸಹಕಾರ ನೀಡುವುದಾಗಿ ಘೋಷಣೆ ಮಾಡಿದ್ದೆವು. ಈಗ ಕೋರ್ಟ್ ಸಂಧಾನ ಸಮಿತಿ ನೇಮಕ ಮಾಡಿದೆ. ಈಗಲೂ ನಾವು ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಸಂಧಾನ ಸಮಿತಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಈಗ ನಮ್ಮ ವಾದಗಳನ್ನು ಸಂಧಾನ ಸಮಿತಿ ಮುಂದೆ ಮಂಡಿಸುತ್ತೇವೆ. ಆದರೆ ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡಲ್ಲ ಎಂದು ಜಫರ್ಯಾಬ್ ಜಿಲಾನಿ ಹೇಳಿದ್ದಾರೆ.
ರಾಜಕೀಯವಾಗಿ ಮತ್ತು ಧಾರ್ಮಿಕವಾಗಿ ಸೂಕ್ಷ್ಮವಾಗಿರುವ ಅಯೋಧ್ಯ ರಾಮಜನ್ಮ ಭೂಮಿ-ಬಾಬ್ರಿ ಮಸೀದಿ ಭೂ ವಿವಾದ ಸಂಬಂಧ ಇಂದು ಮಹತ್ವಗ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ ಸಂಧಾನಕ್ಕಾಗಿ ನಿವೃತ್ತ ನ್ಯಾಯಮೂರ್ತಿ ಖಲೀಫುಲ್ಲಾ ನೇತೃತ್ವದಲ್ಲಿ ಮೂರು ಸದಸ್ಯರ ಸಂಧಾನ ಸಮಿತಿ ನೇಮಕ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com