ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಗೂಗಲ್ ಡೂಡಲ್: 11 ಭಾಷೆಗಳಲ್ಲಿ ಗೌರವ ನಮನ

ಮಹಿಳಾ ದಿನಾಚರಣೆ ಅಂಗವಾಗಿ ಗೂಗಲ್​ ಸಹ ತನ್ನದೇ ಆದ ರೀತಿಯಲ್ಲಿ ಎಲ್ಲ ಮಹಿಳಾಮಣಿಯರಿಗೆ ಗೌರವ ಸಲ್ಲಿಸಿದೆ. ಗೂಗಲ್​ತನ್ನ ಹೋಮ್ ​ಪೇಜ್​ನಲ್ಲಿ ಮಹಿಳಾ ದಿನಕ್ಕಾಗಿ ಡೂಡಲ್​ ಸಮರ್ಪಿಸಿದೆ.

Published: 08th March 2019 12:00 PM  |   Last Updated: 08th March 2019 11:53 AM   |  A+A-


Google Doodle

ಗೂಗಲ್ ಡೂಡಲ್

Posted By : SD SD
Source : Online Desk
ನವದೆಹಲಿ: ಮಾರ್ಚ್ ​8 ಮಹಿಳಾ ದಿನಾಚರಣೆ ದಿನಾಂಕವನ್ನು ದೇಶ - ವಿದೇಶಗಳಲ್ಲಿ ಈ ದಿನವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ.

ಈ ಸಂದರ್ಭದಲ್ಲಿ ಗೂಗಲ್​ ಸಹ ತನ್ನದೇ ಆದ ರೀತಿಯಲ್ಲಿ ಎಲ್ಲ ಮಹಿಳಾಮಣಿಯರಿಗೆ ಗೌರವ ಸಲ್ಲಿಸಿದೆ. ಗೂಗಲ್​ತನ್ನ ಹೋಮ್ ​ಪೇಜ್​ನಲ್ಲಿ ಮಹಿಳಾ ದಿನಕ್ಕಾಗಿ ಡೂಡಲ್​ ಸಮರ್ಪಿಸಿದೆ.

ಮಹಿಳೆ ಎನ್ನುವ ಪದವನ್ನು ಭಾರತದ ಹನ್ನೊಂದು ಭಾಷೆಗಳಲ್ಲಿ ಬರೆಯಲಾಗಿದೆ. ಹಿಂದಿ, ಬೆಂಗಾಲಿ, ಇಂಗ್ಲಿಷ್ ಉರ್ದು ಸೇರಿದಂತೆ ಹನ್ನೊಂದು ಭಾಷೆಯಲ್ಲಿ ಬರೆಯಲಾಗಿದೆ.

1919ರಿಂದ ಮಾರ್ಚ್​ 8ರಂದು ಮಹಿಳಾ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಡೂಡಲ್​ಮೇಲೆ ಕ್ಲಿಕ್ ಮಾಡಿದ ತಕ್ಷಣ ಹದಿಮೂರು ಮಹಿಳಾ ಸಾಧಕಿಯರ ಫೋಟೋ, ಸಂಪೂರ್ಣ ಮಾಹಿತಿ ತೆರೆದುಕೊಳ್ಳುತ್ತದೆ. ಇವರಲ್ಲಿ ಮಹಿಳಾ ವಿಜ್ಞಾನಿಗಳು, ಕಲಾವಿದರು, ಅಥ್ಲೀಟ್​ಗಳು, ಲೇಖಕಿಯರು ಸೇರಿದ್ದಾರೆ.​
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp