ಐಟಿ ದಾಳಿ ವೇಳೆ 2 ಕೋಟಿ ಅಕ್ರಮ ಹಣ ಪತ್ತೆ: ಎಎಪಿ ಶಾಸಕನ ಬಂಧನ

ಐಟಿ ದಾಳಿ ವೇಳೆ 2 ಕೋಟಿ ರುಪಾಯಿ ಅಕ್ರಮ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಾರ್ಟಿ(ಎಎಪಿ) ಶಾಸಕ ನರೇಶ್ ಬಾಲ್ಯನ್ ರನ್ನು ಐಟಿ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ನರೇಶ್ ಬಾಲ್ಯನ್
ನರೇಶ್ ಬಾಲ್ಯನ್
ನವದೆಹಲಿ: ಐಟಿ ದಾಳಿ ವೇಳೆ 2 ಕೋಟಿ ರುಪಾಯಿ ಅಕ್ರಮ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಾರ್ಟಿ(ಎಎಪಿ) ಶಾಸಕ ನರೇಶ್ ಬಾಲ್ಯನ್ ರನ್ನು ಐಟಿ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಅಕ್ರಮ ಮತ್ತು ಲೆಕ್ಕಕ್ಕೆ ಸಿಗದ ಹಣ ದಾಳಿ ವೇಳೆ ಸಿಕ್ಕಿದ್ದರಿಂದ ಉತ್ತಮ್ ನಗರ ಶಾಸಕ ನರೇಶ್ ಬಾಲ್ಯನ್ ಆಸ್ತಿ ವಿತರಕ ಮತ್ತು ಇಬ್ಬರನ್ನು ಐಟಿ ಅಧಿಕಾರಿಗಳು ದ್ವಾರಕಾದಲ್ಲಿ ಪ್ರಶ್ನಿಸಿದ್ದಾರೆ. 
ಐಟಿ ದಾಳಿ ವೇಳೆ ಬಾಲ್ಯನ್ ಹೆಸರು ಕೇಳಿಬಂದಿದ್ದರಿಂದ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ಹಣದ ಮೂಲದ ಬಗ್ಗೆ ಪ್ರಶ್ನಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com