ಮೋದಿ ನಮ್ಮ ತಂದೆ, ದೇಶದ ತಂದೆ.. ಅವರ ನಾಯಕತ್ವ ಒಪ್ಪಿದ್ದೇವೆ: ತ.ನಾಡು ಸಚಿವ ಕೆಟಿ ರಾಜೇಂದ್ರ ಬಾಲಾಜಿ

ಪ್ರಧಾನಿ ಮೋದಿ ನಮ್ಮ ತಂದೆಯ ಸಮಾನರು, ಅಲ್ಲದೆ ಅವರು ದೇಶಕ್ಕೂ ತಂದೆಯಂತೆ... ಹೀಗಾಗಿ ಅವರ ನಾಯಕತ್ವ ಒಪ್ಪಿದ್ದು, ಮಾರ್ಗ ದರ್ಶನದಲ್ಲೇ ಮುನ್ನಡೆಯುತ್ತೇವೆ ಎಂದು ತಮಿಳುನಾಡಿನ ಎಐಎಡಿಎಂಕೆ ಸರ್ಕಾರದ ಸಚಿವ ಕೆಟಿ ರಾಜೇಂದ್ರ ಬಾಲಾಜಿ ಹೇಳಿದ್ದಾರೆ.
ಎಐಎಡಿಎಂಕೆ ಸರ್ಕಾರದ ಸಚಿವ ಕೆಟಿ ರಾಜೇಂದ್ರ ಬಾಲಾಜಿ
ಎಐಎಡಿಎಂಕೆ ಸರ್ಕಾರದ ಸಚಿವ ಕೆಟಿ ರಾಜೇಂದ್ರ ಬಾಲಾಜಿ
ಚೆನ್ನೈ: ಪ್ರಧಾನಿ ಮೋದಿ ನಮ್ಮ ತಂದೆಯ ಸಮಾನರು, ಅಲ್ಲದೆ ಅವರು ದೇಶಕ್ಕೂ ತಂದೆಯಂತೆ... ಹೀಗಾಗಿ ಅವರ ನಾಯಕತ್ವ ಒಪ್ಪಿದ್ದು, ಮಾರ್ಗ ದರ್ಶನದಲ್ಲೇ ಮುನ್ನಡೆಯುತ್ತೇವೆ ಎಂದು ತಮಿಳುನಾಡಿನ ಎಐಎಡಿಎಂಕೆ ಸರ್ಕಾರದ ಸಚಿವ ಕೆಟಿ ರಾಜೇಂದ್ರ ಬಾಲಾಜಿ ಹೇಳಿದ್ದಾರೆ.
ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಅತ್ತ ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಆಡಳಿತ ರೂಢ ಎಐಎಡಿಎಂಕೆ ನಡುವೆ ಮೈತ್ರಿ ಬಹುತೇಕ ಖಚಿತವಾಗಿದೆ. ಇದಕ್ಕೆ ಇಂಬು ನೀಡುವಂತೆ, ಸ್ವತಃ ತಮಿಳುನಾಡಿನ ಸಚಿವ ಕೆಟಿ ರಾಜೇಂದ್ರ ಬಾಲಾಜಿ ಅವರು, 'ಎಐಎಡಿಎಂಕೆ ಪಕ್ಷಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯೇ ತಂದೆಯಂತೆ. ತಮಗೆ ಮಾತ್ರವಲ್ಲ ದೇಶಕ್ಕೂ ಪ್ರಧಾನಿ ಮೋದಿ ತಂದೆಯಂತೆ. ಹೀಗಾಗಿ ಅವರ ನಾಯಕತ್ವವನ್ನು ನಾವು ಒಪ್ಪಿದ್ದು, ಅವರ ಮಾರ್ಗದರ್ಶನದಲ್ಲಿ ನಡೆಯುತ್ತೇವೆ ಎಂದು ಹೇಳಿದ್ದಾರೆ.
'ತಮಿಳುನಾಡಿನ ವಿರುದನಗರ ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಬಾಲಾಜಿ, ನಮ್ಮ ನಾಯಕಿ ಜಯಲಲಿತಾ ನಿಧನವಾದ ನಂತರ ಮೋದಿಯೇ ನಮಗೆ ತಂದೆಯ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ನೀಡುತ್ತಿದ್ದಾರೆ. ಅಮ್ಮ (ಜಯಲಲಿತಾ) ನಿಧನದ ನಂತರ ಅವರೇ (ಮೋದಿ) ನಮಗೆಲ್ಲಾ ಡ್ಯಾಡಿ.. ಎಐಎಡಿಎಂಕೆ ಪಕ್ಷಕ್ಕೆ ಒಬ್ಬರೇ ತಂದೆ, ಅದು ಮೋದಿ ಎಂದು ಸಚಿವರು ಸಭೆಯಲ್ಲಿ ಒತ್ತಿಒತ್ತಿ ಹೇಳಿದ್ದಾರೆ. 
'ಪ್ರಧಾನಿ ಮೋದಿ ಬರೀ ತಮಿಳುನಾಡಿಗೆ ಮಾತ್ರ ತಂದೆಯಲ್ಲ, ಇಡೀ ದೇಶಕ್ಕೆ ಅವರೇ ತಂದೆ. ಹಾಗಾಗಿ, ನಾವು ತಮಿಳುನಾಡಿನಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com