ಪುಲ್ವಾಮ ಉಗ್ರರ ದಾಳಿಯ ಮಾಸ್ಟರ್ ಮೈಂಡ್ ಪತ್ತೆ ಹಚ್ಚಿದ ಸೇನೆ

ಫೆಬ್ರವರಿ 14 ರಂದು ನಡೆದ ಪುಲ್ವಾಮಾ ಭಯೋತ್ಪಾದನಾ ದಾಳಿಯಲ್ಲಿ 40ಸಿಆರ್ ಪಿಎಪ್ ಸೈನಿಕು ಹುತಾತ್ಮರಾಗಿದ್ದರು. ಈ ದಾಳಿಯ ಹಿಂದೆ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಮುದಾಸಿರ್ ಅಹ್ಮದ್ ಖಾನ್ ಅಲಿಯಾಸ್ ಮೊಹದ್ ಭಾಯಿ ...
ಪುಲ್ವಾಮಾ ಉಗ್ರರ ದಾಳಿಯ ನಂತರದ ಚಿತ್ರ
ಪುಲ್ವಾಮಾ ಉಗ್ರರ ದಾಳಿಯ ನಂತರದ ಚಿತ್ರ
ಶ್ರೀನಗರ:  ಫೆಬ್ರವರಿ 14 ರಂದು ನಡೆದ ಪುಲ್ವಾಮಾ ಭಯೋತ್ಪಾದನಾ ದಾಳಿಯಲ್ಲಿ 40ಸಿಆರ್ ಪಿಎಪ್ ಸೈನಿಕು ಹುತಾತ್ಮರಾಗಿದ್ದರು. ಈ ದಾಳಿಯ ಹಿಂದೆ  ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಮುದಾಸಿರ್ ಅಹ್ಮದ್ ಖಾನ್ ಅಲಿಯಾಸ್ ಮೊಹದ್ ಭಾಯಿ ಕೈವಾಡವಿದೆ ಎಂದು ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. 
23 ವರ್ಷದ  ಎಲೆಕ್ಟ್ರಿಷಿಯನ್ ಮುದಾಸಿರ್ ಆಹ್ಮದ್ ಖಾನ್ ಪುಲ್ವಾಮಾ ಜಿಲ್ಲೆಯವನಾಗಿದ್ದು ಜೈಶ್ ಆತ್ಮಹತ್ಯಾ ಬಾಂಬರ್ ದುರಂತದಲ್ಲಿ ಬಳಸಿದ ವಾಹನ ಮತ್ತು ಸ್ಫೋಟಕಗಳನ್ನು ಸಿದ್ದಪಡಿಸಲು ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಹೇಳಿದ್ದಾರೆ.
ಈ ವ್ಯಕ್ತಿ ಟ್ರಾಲ್ ಮಿರ್ ಮೊಹಲ್ಲಾ ನಿವಾಸಿಯಾಗಿದ್ದು, 2017 ರಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪಿಗೆ ಸೇರ್ಪಡೆಯಾಗಿದ್ದಾನೆ. ಅನಂತರ ಅವನನ್ನು ನೂರ್ ಮೊಹಮ್ಮದ್ ಟ್ಯಾಂಟ್ರೆ, ಅಲಿಯಾಸ್ 'ನೂರ್ ಟ್ರ್ಯಾಲಿ', ಎನ್ನುವ ಉಗ್ರನು ಖಾನ್ ನನ್ನು ಜೆಎಂಗೆ ಸೇರಿಸಿದ್ದಾನೆ.
ಡಿಸೆಂಬರ್ 2017 ರಲ್ಲಿ ಭದ್ರತಾ ಪಡೆ ನಡೆಸಿದ ಎನ್ ಕೌಂಟರ್ ನಲ್ಲಿ ಟ್ಯಾಂಟ್ರೆ ಹತ್ಯೆಯಾಗಿದ್ದಾನೆ. ಅವನ ಮರಣದ ನಂತರ ಜನವರಿ 14, 2018 ರಂದು ಮುದಾಸಿರ್ ಖಾನ್ ಮನೆ ಬಿಟ್ಟು ಜೆಎಂನಲ್ಲಿ ಸಕ್ರಿಯ ಸದಸ್ಯನಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಪುಲ್ವಾಮಾ ದಾಳಿಯ ತನಿಖೆ ನಡೆಸುತ್ತಿರುವ ಅಧಿಕಾರಿಗಳ ಪ್ರಕಾರ ಫೆಬ್ರವರಿ 14 ರಂದು ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಸಿಆರ್ಪಿಎಫ್ ಗಾಡಿಯಲ್ಲಿ ಸ್ಫೋಟಕ-ಹೊತ್ತ ಕಾರು ಓಡಿಸಿದ್ದ ಆದಿಲ್ ಅಹ್ಮದ್ ದಾರ್ ಎನ್ನುವವನು  ಮುದಾಸಿರ್ ಖಾನ್ ಜೊತೆ ನಿರಂತರ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದೆ.
ತನ್ನ ಪುದವಿ ನಂತರ ಮುದಾಸಿರ್ ಖಾನ್ ಐಟಿಐ ನಲ್ಲಿ 1 ವರ್ಷದ ಎಲೆಕ್ಟ್ರಿಶಿಯನ್ ಡಿಪ್ಲಮಾ ಕೋರ್ಸ್ ಮಾಡಿದ್ದಾನೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com