ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಮೂರು ದಿನಗಳ ಅಮೆರಿಕಾ ಪ್ರವಾಸ

ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಸೋಮವಾರ ತಮ್ಮ ಮೂರು ದಿನಗಳ ಅಮೆರಿಕಾ ...

Published: 11th March 2019 12:00 PM  |   Last Updated: 11th March 2019 01:23 AM   |  A+A-


Vijay Gokhale, Foreign Secretary .

ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ

Posted By : SUD SUD
Source : PTI
ನವದಹೆಲಿ; ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಸೋಮವಾರ ತಮ್ಮ ಮೂರು ದಿನಗಳ ಅಮೆರಿಕಾ ಪ್ರವಾಸ ಆರಂಭಿಸಿದ್ದು ಈ ಸಮಯದಲ್ಲಿ ಅವರು ಅಮೆರಿಕಾ ಸರ್ಕಾರದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಪ್ರಮುಖ ವಿದೇಶಿ ನೀತಿಗಳು ಮತ್ತು ಭದ್ರತೆ ಅಭಿವೃದ್ಧಿಗೆ ಸಂಬಂಧಪಟ್ಟಂತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.

ದ್ವಿಪಕ್ಷೀಯ ವಿದೇಶಿ ಕಚೇರಿ ಸಮಾಲೋಚನೆ ಮತ್ತು ಕಾರ್ಯತಂತ್ರದ ಭದ್ರತಾ ಮಾತುಕತೆಗೆ ಸಂಬಂಧಪಟ್ಟಂತೆ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿಗಳ ಜೊತೆ ಗೋಖಲೆಯವರು ತಮ್ಮ ಭೇಟಿ ವೇಳೆ ಚರ್ಚಿಸಲಿದ್ದಾರೆ. ಅಲ್ಲದೆ ಅಮೆರಿಕಾ ಸರ್ಕಾರದ ಮತ್ತು ಅಮೆರಿಕಾ ಕಾಂಗ್ರೆಸ್ ನ ಹಿರಿಯ ಅಧಿಕಾರಿಗಳನ್ನು ಸಹ ಭೇಟಿ ಮಾಡಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಸಚಿವಾಲಯ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕರ ದಾಳಿ ನಡೆದ ನಂತರ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉಂಟಾಗಿರುವ ಉದ್ವಿಗ್ನ ಸ್ಥಿತಿಯ ಮಧ್ಯೆ ಅಮೆರಿಕಾಕ್ಕೆ ವಿದೇಶಾಂಗ ಕಾರ್ಯದರ್ಶಿಗಳ ಈ ಭೇಟಿ ಮಹತ್ವ ಪಡೆದಿದೆ. ಎರಡೂ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳು ರಾಜಕೀಯ ವ್ಯವಹಾರಗಳ ರಾಜ್ಯ ಕಾರ್ಯದರ್ಶಿ ಡೇವಿಡ್ ಹಲೆ ಮತ್ತು ಶಸ್ತ್ರಾಸ್ತ್ರ ನಿಯಂತ್ರಣ ಮತ್ತು ಅಂತಾರಾಷ್ಟ್ರೀಯ ಭದ್ರತೆಯ ರಾಜ್ಯ ಕಾರ್ಯದರ್ಶಿ ಆಂಡ್ರ್ಯೂ ಥಾಮ್ಸನ್ ಅವರ ಸಮ್ಮುಖದಲ್ಲಿ ಈ ಮಾತುಕತೆ ನಡೆಯಲಿದೆ ಎಂದು ರವೀಶ್ ಕುಮಾರ್ ತಿಳಿಸಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp