ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಫೋಟೋ ಬಳಕೆ; ಬಿಜೆಪಿ ಶಾಸಕನಿಗೆ ಚುನಾವಣಾ ಆಯೋಗ ನೊಟೀಸ್

ತಮ್ಮ ಚುನಾವಣಾ ಪ್ರಚಾರ ಪೋಸ್ಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ...
ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ವರ್ಧಮಾನ್
ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ವರ್ಧಮಾನ್
ನವದೆಹಲಿ: ಚುನಾವಣಾ ಪ್ರಚಾರ ಪೋಸ್ಟರ್ ನಲ್ಲಿ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಭಾವಚಿತ್ರವನ್ನು ಹಾಕಿದ್ದಕ್ಕೆ ಚುನಾವಣಾ ಆಯೋಗ ದೆಹಲಿಯ ಬಿಜೆಪಿ ಶಾಸಕ ಓಂ ಪ್ರಕಾಶ್ ಶರ್ಮ ಅವರಿಗೆ ಶೋಕಾಸ್ ನೊಟೀಸ್ ಜಾರಿ ಮಾಡಿದೆ.
ಕೂಡಲೇ ಪೋಸ್ಟರ್ ನ್ನು ತೆಗೆದುಹಾಕಿ ನಾಳೆಯೊಳಗೆ ಉತ್ತರಿಸುವಂತೆ ಚುನಾವಣಾ ಆಯೋಗ ತಿಳಿಸಿದೆ. ಶಾಸಕ ಶರ್ಮ ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ಪೋಸ್ಟರ್ ನಲ್ಲಿ ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಜೊತೆಗೆ ಭಾರತೀಯ ವಾಯುಪಡೆ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಫೋಟೋಗಳನ್ನು ಹಾಕಿ ಪಾಕಿಸ್ತಾನ ನಮಗೆ ತಲೆಬಾಗಿದೆ. ನಮ್ಮ ಧೈರ್ಯಶಾಲಿ ಸೈನಿಕರು ಅವರಿಗೆ ತಕ್ಕ ಶಾಸ್ತಿ ನೀಡಿದ್ದಾರೆ. ಇದೊಂದು ಬಹುದೊಡ್ಡ ರಾಜತಾಂತ್ರಿಕ ಗೆಲುವು, ಮೋದಿಯವರು ಅಭಿನಂದನ್ ಅವರನ್ನು ಅತ್ಯಲ್ಪ ಸಮಯದಲ್ಲಿಯೇ ಭಾರತಕ್ಕೆ ಕರೆತಂದಿದ್ದಾರೆ ಎಂದು ಪೋಸ್ಟರ್ ನಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com