ರಾಫೆಲ್ ಡೀಲ್: ಅರ್ಜಿದಾರರು ಸಲ್ಲಿಸಿದ ದಾಖಲೆಗಳು ರಾಷ್ಟ್ರೀಯ ಭದ್ರತೆಗೆ ಅಪಾಯ - ಸುಪ್ರೀಂಗೆ ಕೇಂದ್ರ

ರಾಫೆಲ್ ಡೀಲ್ ತೀರ್ಪು ಮರು ಪರಿಶೀಲನೆ ಕೋರಿ ಅರ್ಜಿದಾರರು ಸಲ್ಲಿಸಿರುವ ದಾಖಲೆಗಳು ಅತ್ಯಂತ ಸೂಕ್ಷ್ಮವಾಗಿದ್ದು, ರಾಷ್ಟ್ರೀಯ ಭದ್ರತೆಗೆ ಅಪಾಯ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ರಾಫೆಲ್ ಡೀಲ್ ತೀರ್ಪು ಮರು ಪರಿಶೀಲನೆ ಕೋರಿ ಅರ್ಜಿದಾರರು ಸಲ್ಲಿಸಿರುವ ದಾಖಲೆಗಳು ಅತ್ಯಂತ ಸೂಕ್ಷ್ಮವಾಗಿದ್ದು, ರಾಷ್ಟ್ರೀಯ ಭದ್ರತೆಗೆ ಅಪಾಯ ತಂದಿದೊಡ್ಡಲಿವೆ ಎಂದು ಕೇಂದ್ರ ಸರ್ಕಾರ ಬುಧವಾರ ಸುಪ್ರೀಂಕೋರ್ಟ್​​ಗೆ ತಿಳಿಸಿದೆ. 
ಇಂದು ರಾಫೆಲ್ ಡೀಲ್​ ದಾಖಲೆ ಪೋಟೋಪ್ರತಿ ಕಳುವಾಗಿದ್ದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅಫಿಡವಿಟ್ ಸಲ್ಲಿಸಿದ ಕೇಂದ್ರ ಸರ್ಕಾರ, ದಾಖೆಲಗಳ ಫೋಟೋ ಪ್ರತಿಗಳನ್ನು ವ್ಯಾಪಕವಾಗಿ ಹಂಚಲಾಗುತ್ತಿದ್ದು, ಇದು ದೇಶದ ಶತ್ರುಗಳಿಗೆ ಲಭ್ಯವಾಗಿದೆ ಎಂದು ದೂರಿದೆ.
ಸರ್ಕಾರದ ಅನುಮತಿ ಇಲ್ಲದೆ ಸೂಕ್ಷ್ಮ ದಾಖಲೆಗಳ ಫೋಟೋ ಪ್ರತಿ ಪಡೆದಿರುವುದು ಅಪರಾಧ. ಇದು ರಾಷ್ಟ್ರೀಯ ಭದ್ರತೆಯನ್ನು ಅಪಾಯಕ್ಕೆ ತಳ್ಳುತ್ತದೆ. ರಫೇಲ್​​​ ದಾಖಲೆ ಫೋಟೊಪ್ರತಿ ಕದ್ದವರು ಭಾರೀ ಬೆಲೆ ತೆರಬೇಕಾಗುತ್ತದೆ. ಇವರಿಗೆ ತಕ್ಕ ಶಿಕ್ಷೆ ವಿಧಿಸಬೇಕೆಂದು ಕೇಂದ್ರ ಒತ್ತಾಯಿಸಿದೆ.
ಈ ಹಿಂದೆಯೇ ರಕ್ಷಣಾ ಇಲಾಖೆಯಿಂದ ಈ ದಾಖಲೆಗಳನ್ನು ಯಾರೋ ಹಾಲಿ ಉದ್ಯೋಗಿಗಳು ಕಳವು ಮಾಡಿರಬಹುದು. ಈ ದಾಖಲೆಗಳು ತುಂಬಾ ರಹಸ್ಯವಾದವು. ಇದು ಸಾರ್ವಜನಿಕರಿಗೆ ಲಭ್ಯವಾಗಬಾರದು ಎಂದು ಅಟಾರ್ನಿ ಜನರಲ್ ಅವರು ಕೋರ್ಟ್‌ಗೆ ತಿಳಿಸಿದ್ದರು.
ಬಳಿಕ ಈ ವಿಚಾರಕ್ಕೆ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಜನರಲ್​​​ ಅಟರ್ನಿ, ದಾಖಲೆಗಳು ಹೇಗೆ ಕಳವಾಗಿವೆ ಎಂಬ ಕುರಿತು ತನಿಖೆ ನಡೆಸುತ್ತಿದ್ದೇವೆ. 'ರಹಸ್ಯ ದಾಖಲೆಗಳನ್ನು ಅರ್ಜಿಯ ಜತೆ ಸೇರಿಸಬಾರದು. ಇದು ಅಪರಾಧವಾಗುತ್ತದೆ. ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಮರುಪರಿಶೀಲನಾ ಮತ್ತು ಸುಳ್ಳು ಅರ್ಜಿಗಳನ್ನು ವಜಾ ಮಾಡಬೇಕು' ಎಂದು ಸುಪ್ರೀಂ ಕೋರ್ಟ್‌ಗೆ ಅಟಾರ್ನಿ ಜನರ್ ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com