ರಫೇಲ್ ಒಪ್ಪಂದ: ಪ್ರಧಾನಿ ಕಾರ್ಯಾಲಯದ ವಿರುದ್ಧ ಎನ್ ಎಸ್ ಯುಐ ದೂರು ದಾಖಲು

ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ರಾಷ್ಟ್ರೀಯ ವಿದ್ಯಾರ್ಥಿಗಳ ಭಾರತೀಯ ಒಕ್ಕೂಟ- ಎನ್ ಎಸ್ ಯುಐ ಪ್ರಧಾನಿ ಕಾರ್ಯಾಲಯದ ವಿರುದ್ಧ ದೂರು ಸಲ್ಲಿಸಿದೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ರಾಷ್ಟ್ರೀಯ ವಿದ್ಯಾರ್ಥಿಗಳ ಭಾರತೀಯ ಒಕ್ಕೂಟ- ಎನ್ ಎಸ್ ಯುಐ  ಪ್ರಧಾನಿ ಕಾರ್ಯಾಲಯದ ವಿರುದ್ಧ ದೂರು ಸಲ್ಲಿಸಿದೆ.

ದೆಹಲಿಯಲ್ಲಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯವರೆಗೂ ಮೆರವಣಿಗೆಯಲ್ಲಿ ತೆರಳಿ ಎನ್ ಎಸ್ ಯುಐ ಸದಸ್ಯರು ಪೊಲೀಸರಿಗೆ  ದೂರು ಸಲ್ಲಿಸಿದರು.

ರಫೇಲ್  ಯುದ್ಧ ವಿಮಾನ ಒಪ್ಪಂದವನ್ನು ಹೆಚ್ ಎಎಲ್ ಗೆ ನೀಡುವ ಬದಲು ರಿಲಯನ್ಸ್ ಡಿಪೆನ್ಸ್ ಕಂಪನಿಗೆ ನೀಡುವ  ಮೂಲಕ ಪ್ರಧಾನಿ ನರೇಂದ್ರ ಮೋದಿ ಪ್ರಧಾನಮಂತ್ರಿ ಕಾರ್ಯಾಲಯವನ್ನು ದುರ್ಬಲಕೆ ಮಾಡಿಕೊಂಡಿದ್ದಾರೆ.ಇದರಿಂದಾಗಿ ಸಾರ್ವಜನಿಕ ಖಜಾನೆಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಎನ್ ಎಸ್ ಯುಐ ಆರೋಪಿಸಿದೆ.

ಮೋದಿ ಅವರ ಅಧಿಕಾರ ದುರ್ಬಳಕೆಯಿಂದ ರಿಲಯನ್ಸ್ ಡಿಪೆನ್ಸ್ ಕಂಪನಿಗೆ ಸಾವಿರಾರು ಕೋಟಿ ರೂಪಾಯಿ ಲಾಭ ತಂದುಕೊಟಿದೆ. ಆದರೆ, ಇದು ರಾಷ್ಟ್ರದ ಸುರಕ್ಷತೆ ಮತ್ತು ಭದ್ರತೆಗೆ ಗಂಭೀರವಾದ ಅಪಾಯವನ್ನು ತಂದೂಡ್ಡಿದೆ ಎಂದು ದೂರಿನಲ್ಲಿ  ಹೇಳಲಾಗಿದೆ.

ಎನ್ ಎಸ್ ಯುಐನಿಂದ ದೂರು ಸ್ವೀಕರಿಸಲಾಗಿದೆ. ಆದರೆ, ರಫೇಲ್  ಒಪ್ಪಂದದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಸರ್ಕಾರ ಹಾಗೂ ರಿಲಯನ್ಸ್ ಡಿಪೆನ್ಸ್ ಹೇಳಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com