ಜಾಗತಿಕ ಉಗ್ರ ಪಟ್ಟಿಗೆ 'ಅಜರ್‌ ಮಸೂದ್' ಹೆಸರು ಸೇರ್ಪಡೆಗೆ ಚೀನಾ ಅಡ್ಡಿ; ಭಾರತ ತೀವ್ರ ಅಸಮಾಧಾನ

ಜಾಗತಿಕ ಉಗ್ರ ಪಟ್ಟಿಗೆ ಜೈಷ್ ಇ ಮೊಹಮದ್ ಉಗ್ರ ಸಂಘಟನೆ ಸಂಸ್ಥಾಪಕ ಮಸೂದ್ ಅಜರ್ ನನ್ನು ಸೇರಿಸುವ ಭಾರತದ ಪ್ರಯತ್ನಕ್ಕೆ ಮತ್ತೆ ಚೀನಾ ಅಡ್ಡಗಾಲು ಹಾಕಿದ್ದು, ಚೀನಾ ನಡೆಗೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಜಾಗತಿಕ ಉಗ್ರ ಪಟ್ಟಿಗೆ ಜೈಷ್ ಇ ಮೊಹಮದ್ ಉಗ್ರ ಸಂಘಟನೆ ಸಂಸ್ಥಾಪಕ ಮಸೂದ್ ಅಜರ್ ನನ್ನು ಸೇರಿಸುವ ಭಾರತದ ಪ್ರಯತ್ನಕ್ಕೆ ಮತ್ತೆ ಚೀನಾ ಅಡ್ಡಗಾಲು ಹಾಕಿದ್ದು, ಚೀನಾ ನಡೆಗೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಈ ಬಗ್ಗೆ ತನ್ನ ಪ್ರತಿಕ್ರಿಯೆ ನೀಡಿರುವ ಭಾರತ ಚೀನಾ ನಡೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ವಿದೇಶಾಂಗ ಇಲಾಖೆ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸುವ ತನ್ನ ಪ್ರಯತ್ನವನ್ನು ಮತ್ತೆ ಮುಂದುವರೆಸುವುದಾಗಿ ಹೇಳಿದೆ.
'ಚೀನಾ ನಡೆಯಿಂದಾಗಿ ನಿಜಕ್ಕೂ ನಿರಾಶೆಯಾಗಿದೆ. ನೂರಾರು ಮಂದಿಯ ಸಾವಿಗೆ ಕಾರಣವಾದ ಉಗ್ರ ಸಂಘಟನೆಯ ಮುಖ್ಯಸ್ಥನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸುವ ಪ್ರಯತ್ನಕ್ಕೆ ಅಡ್ಡಿಯಾಗುವುದು ಸರಿಯಲ್ಲ. ವಿಶ್ವ ಸಮುದಾಯವೇ ಮಸೂದ್ ಅಜರ್ ನನ್ನು ಜಾಗತಿಕ ಉಗ್ರನೆಂದು ಪರಿಗಣಿಸುತ್ತಿರುವಾಗಿ ಭಾರತದ ಪ್ರಯತ್ನಕ್ಕೆ ಚೀನಾ ಅಡ್ಡಿಯಾಗುತ್ತಿದೆ. ಸ್ವತಃ ಜೈಶ್ ಇ ಉಗ್ರ ಸಂಘಟನೆಯೇ 44 ಮಂದಿ ಯೋಧರ ಸಾವಿಗೆ ಕಾರಣ ಎಂದು ಜವಾಬ್ದಾರಿ ಹೊತ್ತುಕೊಂಡಿದೆ. ಹೀಗಿರುವಾಗಿ ಆ ಸಂಘಟನೆಯ ಮುಖ್ಯಸ್ಥನನ್ನು ಜಾಗತಿಕ ಉಗ್ರನೆಂದು ಘೋಷಣೆ ಮಾಡಬೇಕು ಎಂದು ಭಾರತ ವಿದೇಶಾಂಗ ಇಲಾಖೆ ಅಗ್ರಹಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com