ಮಸೂದ್ ಅಝರ್ ವಿಚಾರದಲ್ಲಿ ಚೀನಾಕ್ಕೆ ಶರಣಾದ ಮೋದಿ: ಒಮರ್ ಅಬ್ದುಲ್ಲಾ

ಜೈಷ್- ಇ- ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಝರ್ ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಶರಣಾಗಿದ್ದಾರೆ ಎಂದು ನ್ಯಾಷನಲ್ ಕಾನ್ಪರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ ಟೀಕಿಸಿದ್ದಾರೆ.
ಒಮರ್ ಅಬ್ದುಲ್ಲಾ
ಒಮರ್ ಅಬ್ದುಲ್ಲಾ

ಜಮ್ಮು-ಕಾಶ್ಮೀರ:  ಜೈಷ್- ಇ- ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಝರ್ ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಶರಣಾಗಿದ್ದಾರೆ ಎಂದು  ನ್ಯಾಷನಲ್ ಕಾನ್ಪರೆನ್ಸ್  ಮುಖಂಡ ಒಮರ್ ಅಬ್ದುಲ್ಲಾ ಟೀಕಿಸಿದ್ದಾರೆ.

ಲೋಕಸಭಾ ಚುನಾವಣೆ ಜೊತೆಗೆ ಜಮ್ಮು- ಕಾಶ್ಮೀರ ಆಸೆಂಬ್ಲಿ ಚುನಾವಣೆಗೆ ಏಕಕಾಲದಲ್ಲಿ ನಡೆಸದೆ ಎನ್ ಡಿಎ ಸರ್ಕಾರ ಪಾಕಿಸ್ತಾನಕ್ಕೆ ದೊಡ್ಡ ಗೆಲುವುನ್ನು ನೀಡಿದೆ ಎಂದು ಅವರು ಹೇಳಿದ್ದಾರೆ.

ಅಝರ್ ವಿಚಾರದಲ್ಲಿ ಚೀನಾಕ್ಕೆ ಶರಣಾಗಿರುವ ಮೋದಿ  ಜಮ್ಮು ಕಾಶ್ಮೀರ ಆಸೆಂಬ್ಲಿ ಚುನಾವಣೆ ನಡೆಸಲು ವಿಳಂಬ ಮಾಡುತ್ತಿದ್ದಾರೆ  ಆದರೂ  ಉಗ್ರರ ವಿರುದ್ಧ ಹಾಗೂ ಆಂತರಿಕ ಭದ್ರತೆ ವಿಚಾರದಲ್ಲಿ ದಿಟ್ಟ ನಿರ್ಧಾರ ಕೈಗೊಂಡಿರುವುದಾಗಿ ಬಿಜೆಪಿ ಹೇಗೆ ಹೇಳುತ್ತದೆ ಎಂದು ಅವರು ಟ್ವೀಟರ್ ನಲ್ಲಿ ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com