ವಿಂಗ್ ಕಮಾಂಡರ್ ಅಭಿನಂದನ್ ವಿಚಾರಣೆ ಅಂತ್ಯ, ಅನಾರೋಗ್ಯದ ನಿಮಿತ್ತ ರಜೆ ಪಡೆಯಲು ಸೂಚನೆ

ಪಾಕಿಸ್ತಾನದ ಎಫ್ ೧೬ ಯುದ್ಧ ವಿಮಾನವನ್ನು ಹೊಡೆದುರುಳಿಸಿ ಪಾಕ್ ಸೇನೆಗೆ ಸಿಕ್ಕು ಮತ್ತೆ ಬಿಡುಗಡೆಯಾಗಿದ್ದ ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ವರ್ತಮಾನ್ ವಿಚಾರಣೆ ಪೂರ್ಣವಾಗಿದೆ.
ಅಭಿನಂದನ್ ವರ್ತಮಾನ್
ಅಭಿನಂದನ್ ವರ್ತಮಾನ್
ನವದೆಹಲಿ: ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿ  ಪಾಕ್ ಸೇನೆಗೆ ಸಿಕ್ಕು ಮತ್ತೆ ಬಿಡುಗಡೆಯಾಗಿದ್ದ ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ವರ್ತಮಾನ್ ವಿಚಾರಣೆ ಪೂರ್ಣವಾಗಿದೆ. ಸದ್ಯ ಅವರ ಅನಾರೋಗ್ಯದ ಕಾರಣ ಕೆಲ ದಿನಗಳವರೆಗೆ ರಜೆ ಮೇಲೆ ತೆರಳಲು ಹೇಳಲಾಗಿದೆ./
ವಿಂಗ್​ ಕಮಾಂಡರ್​ ಅಭಿನಂದನ್​ ವಿಚಾರಣೆ ಪೂರ್ಣವಾಗಿದ್ದು ಭಾರತೀಯ ವಾಯುಪಡೆ ಸೇರಿ ಹಲವು ತನಿಖಾ ಸಂಸ್ಥೆಗಳು ಅವರ ವಿಚಾರಣೆ ಮಾಡಿದ್ದಾರೆ. ಸದ್ಯ ಅವರನ್ನು ಸೇನೇ ವೈದ್ಯರ ಸಲಹೆಯಂತೆ ಕೆಲ ವಾರಗಳ ಕಾಲ ಅನಾರೋಗ್ಯದ ಮೇಲೆ ರಜೆ ಪಡೆಯಲು ಹೇಳಲಾಗಿದೆ.
ಅಭಿನಂದನ್ ಅವರ ವೈದ್ಯಕೀಯ ದೃಢತೆಯನ್ನು ಮುಂದಿನ ದಿನಗಳಲ್ಲಿ ವೈದ್ಯಕೀಯ ಮಂಡಳಿಯು ನಿರ್ಧರಿಸಲಿದೆ.ಮಂಡಳಿಯ ವರದಿಯ ಆಧಾರದ ಮೇಲೆ ಅವರು ಕರ್ತವ್ಯಕ್ಕೆ ಮರಳಬಹುದೆ, ಬೇಡವೆ ಎಂದು ನಿರ್ಧಾರವಾಗಲಿದೆ ಎಂದು ಮೂಲಗಳು ಹೇಳಿದೆ.
ಫೆಬ್ರವರಿ 27ರಂದು ಅಭಿನಂದನ್ ವರ್ತಮಾನ್ ತಾವು ಪಾಕಿಸ್ತಾನಕ್ಕೆ ಸೇರಿದ್ದ ಎಫ್ 16ಅನ್ನು ತಮ್ಮ ಮಿಗ್ -21 ವಿಮಾನ ಬಳಸಿ ಹೊಡೆದುರುಳಿಸಿದ್ದರು. ಆ ಬಳಿಕ ಪಾಕ್ ಸೇನೆಗೆ ಸಿಕ್ಕಿ ಬಿದ್ದಿದ್ದ ಅಭಿನಂದನ್ ಅವರು ಎರಡೂವರೆ ದಿನಗಳ ಬಳಿಕ ಭಾರತಕ್ಕೆ ಮರಳಿದ್ದರು.
ಪಾಕಿಸ್ತಾನದಲ್ಲಿ ಅಭಿನಂದನ್ ಅವರಿಗೆ ಮಾನಸಿಕ ಕಿರುಕುಳ ನಿಡಲಾಗಿತ್ತೆಂದು ಮೂಲಗಳು ವಿವರಿಸಿದ್ದವು. ಅಲ್ಲದೆ ಮಾರ್ಚ್ 4 ರಂದು ಐಎಎಫ್ ಚೀಫ್ ಏರ್ ಮಾರ್ಷಲ್ ಬಿ.ಎಸ್. ಧನೋವಾ ಅಭಿನಂದನ್ ಮತ್ತೆ ಪೈಲಟ್ ವೃತ್ತಿಗೆ ಮರಳಲಿದ್ದಾರೆ ಎಂದೂ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com