ಅಮೆರಿಕದ ರಿಯಾಲಿಟಿ ಶೋ ಗೆದ್ದ ಚೆನ್ನೈನ 13 ವರ್ಷದ ಪೋರ, ವಿಶ್ವದ ಅತ್ಯುತ್ತಮ ಪಿಯಾನೋ ವಾದಕ

13 ವರ್ಷದ ಪೋರ ಲಿಡಿಯನ್ ನದಾಸ್ವರಾಮ್ ಅಮೆರಿಕಾದ ರಿಯಾಲಿಟಿ ಶೋವೊಂದರಲ್ಲಿ ವಿಜೇತನಾಗುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾನೆ.
ಲಿಡಿಯಾನ್ ನದಾಸ್ವರಾಮ್
ಲಿಡಿಯಾನ್ ನದಾಸ್ವರಾಮ್

ಚೆನ್ನೈ: 13 ವರ್ಷದ ಪೋರ ಲಿಡಿಯನ್ ನದಾಸ್ವರಾಮ್ ಅಮೆರಿಕಾದ ರಿಯಾಲಿಟಿ ಶೋವೊಂದರಲ್ಲಿ ವಿಜೇತನಾಗುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾನೆ. ವಿಶ್ವದ ಅತ್ಯುತ್ತಮ ಪಿಯಾನೋ ವಾದಕ ರಿಯಾಲಿಟಿ ಶೋ ನಲ್ಲಿ ಈತ ಗೆಲುವು ಸಾಧಿಸಿದ್ದು, 1 ಮಿಲಿಯನ್ ಅಂದರೆ 6.9 ಕೋಟಿ ರೂಪಾಯಿ ಬಹುಮಾನ ಪಡೆದುಕೊಂಡಿದ್ದಾನೆ.

ಜೇಮ್ಸ್ ಕಾರ್ಡೇನ್ ಈ ಶೋ ಆಯೋಜಿಸಿದ್ದರು.ಫೇತ್ ಹಿಲ್, ರುಪಾಲ್ ಚಾರ್ಲ್ಸ್ ಮತ್ತು ಡ್ರೂ ಬ್ಯಾರಿಮೋರ್ ಮುಖ್ಯ ತೀರ್ಪುಗಾರರಾಗಿದ್ದರೆ, ಇನ್ನಿತರ 50 ಮಂದಿ ಜಡ್ಜ್ ಗಳು ನದಾಸ್ವರಾಮ್ ಗೆಲುವಿಗೆ ನೆರವು ನೀಡಿದ್ದಾರೆ.
ಅಂತಿಮ ಪಂದ್ಯದಲ್ಲಿ ಎರಡು ಪಿಯಾನೋ ಮೆಡ್ಲೀಸ್ ಗಳನ್ನು ನುಡಿಸಿದ ನದಾಸ್ವರಾಮ್  84 ಅಂಕ  ಪಡೆದುಕೊಂಡಿದ್ದ. ದಕ್ಷಿಣ ಕೊರಿಯಾದ ಕುಕ್ಕಿವೊನ್ ಗ್ರೂಪ್  ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ.
ಲಿಡಿಯಾನ್ ಯಶಸ್ಸು ಭಾರತದ ಯಶಸ್ಸು ಆಗಿದೆ.  ಇದು ನಮ್ಮ ಜೀವನಕ್ಕೆ ಭರವಸೆ, ಪ್ರೀತಿ ಮತ್ತು ಸಂತೋಷವನ್ನು ತಂದಿದೆ ಎಂದು ಎಆರ್ ರೆಹಮಾನ್  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್  ಜೊತೆಗೆ ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com