10 ಲಕ್ಷ ಹ್ಯಾಂಡ್ ಗ್ರೆನೇಡ್ ಖರೀದಿಗೆ ಮುಂದಾದ ರಕ್ಷಣಾ ಸಚಿವಾಲಯ

ಭಾರತ ಮತ್ತು ಪಾಕಿಸ್ತಾನ ನಡುವೆ ಸೈನಿಕ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ ರಕ್ಷಣಾ ಸಚಿವಾಲಯ ಭಾರತೀಯ ಸೇನೆಗೆ 10 ಲಕ್ಷ ಹ್ಯಾಂಡ್‌ ಗ್ರೆನೇಡ್‌...

Published: 15th March 2019 12:00 PM  |   Last Updated: 15th March 2019 07:16 AM   |  A+A-


Defence ministry plans to buy 10 lakh hand grenades for combat troops

ಸಾಂದರ್ಭಿಕ ಚಿತ್ರ

Posted By : LSB LSB
Source : ANI
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಸೈನಿಕ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ ರಕ್ಷಣಾ ಸಚಿವಾಲಯ ಭಾರತೀಯ ಸೇನೆಗೆ 10 ಲಕ್ಷ ಹ್ಯಾಂಡ್‌ ಗ್ರೆನೇಡ್‌ ಖರೀದಿಗೆ ಮುಂದಾಗಿದೆ.

ಈ ವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ, ಭಾರತೀಯ ಸಂಸ್ಥೆಯೊಂದರಿಂದ 10 ಲಕ್ಷ ಮಲ್ಟಿ ಮೋಡ್‌ ಹ್ಯಾಂಡ್‌ ಗ್ರೆನೇಡ್‌ ಖರೀದಿಯ ಪ್ರಸ್ತಾವನೆಗೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಪ್ರಸ್ತುತ ಸೇನೆಯ ಬಳಿ ಇರುವ ಎಚ್‌ಇ-36 ಗ್ರೆನೇಡ್‌ಗಳ ಬದಲಾಗಿ ಡಿಆರ್‌ಡಿಒ ಹಾಗೂ ಪ್ರೊಡಕ್ಷನ್‌ ಏಜೆನ್ಸಿಯಿಂದ ತಯಾರಿಸಲ್ಪಟ್ಟ ಹೊಸ ಮಲ್ಟಿ ಮೋಡ್‌ ಹ್ಯಾಂಡ್‌ ಗ್ರೆನೇಡ್‌ಗಳ ಖರೀದಿಗೆ ಸಿದ್ದತೆ ನಡೆಸಲಾಗಿದೆ ಎನ್ನಲಾಗಿದೆ. 

ಭಾರತೀಯ ಸೇನಾ ಪಡೆಗೆ ಅಗತ್ಯವಾದ ಶಸ್ತ್ರಾಸ್ತ್ರ ಖರೀದಿಗೆ ಆದ್ಯತೆ ನೀಡಿರುವ ಕೇಂದ್ರ ಸರ್ಕಾರ, ಈಗಾಗಲೇ ಅತ್ಯಾಧುನಿಕ ರೈಫಲ್‌ಗಳ ಖರೀದಿ ಹಾಗೂ ಉತ್ಪಾದನೆಗೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಸಹಿ ಹಾಕಿದೆ. 500 ಕೋಟಿ ರೂ,ಗೂ ಹೆಚ್ಚಿನ ಮೊತ್ತದ ಒಪ್ಪಂದ ಇದಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಇದಕ್ಕು ಮುನ್ನ 75000 ಸಿಗ್‌ ಅಸಲ್ಟ್‌ ರೈಫಲ್‌ಗಳ ಖರೀದಿಗೆ ಅಮೆರಿಕ ಮೂಲದ ಕಂಪನಿ ಜತೆಗೆ ರಕ್ಷಣಾ ಇಲಾಖೆ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದಲ್ಲಿ ರಷ್ಯಾದ ಸಂಸ್ಥೆಯ ಪಾಲುದಾರಿಕೆಯೂ ಇದ್ದು, ಅತ್ಯಾಧುನಿಕ ಎಕೆ-203 ರೈಫಲ್‌ಗಳನ್ನು ಸೇನೆಗೆ ಸೇರಿಸಲು ಸಿದ್ದತೆ ನಡೆಸಲಾಗಿದೆ. 

ಪುಲ್ವಾಮಾ ದಾಳಿ ಬಳಿಕ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಇನ್ನಷ್ಟು ಬಿಗಡಾಯಿಸಿದ್ದು, ಪಾಕಿಸ್ತಾನವನ್ನು ಜಾಗತಿಕವಾಗಿ ಪ್ರತ್ಯೇಕಿಸಲು ಭಾರತ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಪ್ರಸ್ತಾಪ ಮಾಡಿತ್ತು.
Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp