ವಡಕ್ಕನ್? ವಡಕ್ಕನ್ ದೊಡ್ಡ ನಾಯಕರೇನಲ್ಲ: ರಾಹುಲ್

ಇತ್ತೀಚಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಸೋನಿಯಾಗಾಂಧಿ ಆಪ್ತ ವಡಕ್ಕನ್ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಲಘುವಾಗಿ ಮಾತನಾಡಿದ್ದಾರೆ.

Published: 15th March 2019 12:00 PM  |   Last Updated: 15th March 2019 08:12 AM   |  A+A-


Vadakkan

ವಡಕ್ಕನ್

Posted By : ABN ABN
Source : PTI
ರಾಯಪುರ: ಇತ್ತೀಚಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಸೋನಿಯಾಗಾಂಧಿ ಆಪ್ತ ವಡಕ್ಕನ್  ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಲಘುವಾಗಿ ಮಾತನಾಡಿದ್ದಾರೆ.

 ಒಡಿಶಾ ಪ್ರವಾಸಕ್ಕೂ ಮುನ್ನ ರಾಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ವಡಕ್ಕನ್ ? ಎಂದು ಪ್ರಶ್ನಿಸಿದರಲ್ಲದೇ,  ವಡಕ್ಕನ್ ದೊಡ್ಡ ನಾಯಕರಲ್ಲ ಎಂದರು.

ಬಾಲಕೋಟ್ ಸ್ಟ್ರೈಕ್ ನಂತರ ಕಾಂಗ್ರೆಸ್ ಪಕ್ಷದ ನಿಲುವಿನಿಂದ ಬೇಸರಗೊಂಡು ಕೇರಳದ ಟಾಮ್ ವಡಕ್ಕನ್  ಬಿಜೆಪಿಗೆ ಸೇರ್ಪಡೆಯಾಗಿದ್ದರು. ನಿರುದ್ಯೋಗ , ರೈತರ ಸಮಸ್ಯೆಗಳು, ರಾಫೆಲ್ ಒಪ್ಪಂದ ವಿಚಾರವಾಗಿ ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

ನರೇಂದ್ರ ಮೋದಿ ಉದ್ಯೋಗ ಸೃಷ್ಟಿಸುವಲ್ಲಿ ವಿಫಲರಾಗಿದ್ದಾರೆ. ರಾಫೆಲ್ ಒಪ್ಪಂದದಲ್ಲಿ 30 ಸಾವಿರ ಕೋಟಿ ರೂಪಾಯಿಯನ್ನು ಮೋದಿ, ಅನಿಲ್ ಅಂಬಾನಿ ಅವರ ಜೀಬಿಗೆ ಹಾಕಿದ್ದಾರೆ ಎಂದು ಆರೋಪಿಸಿದರು.

ರೈತರ ಬಗ್ಗೆ ಮಾತನಾಡುವ ಮೋದಿ ಐದು ವರ್ಷಗಳ ಅವಧಿಯಲ್ಲಿ ರೈತರ ಬಗ್ಗೆ ಏನನ್ನೂ ಮಾತನಾಡಲಿಲ್ಲ. ರೈತರಿಗೆ ಹಣ ನೀಡದ ಮೋದಿ, ಅನಿಲ್ ಅಂಬಾನಿ ಅಂತಹ ಉದ್ಯಮಿಗಳಿಗೆ ಹಣ ನೀಡುತ್ತಾರೆ ಎಂದು  ಆರೋಪಿಸಿದರು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp