ದೇವರಿಗೇ ನಿಮ್ಮ ಕೋರಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲವಾದರೆ, ಸಂಸದನಿಂದ ಹೇಗೆ ಸಾಧ್ಯ?: ಕೇಂದ್ರ ಸಚಿವ

ಸ್ವತಃ ದೇವರಿಗೇ ನಿಮ್ಮ ಕೋರಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲವಾದರೆ ಒಬ್ಬ ಸಂಸದ ಹೇಗೆ ನಿಮ್ಮ ಕೋರಿಕೆ ಈಡೇರಿಸಲು ಸಾಧ್ಯ?...
ಮಹೇಶ್ ಶರ್ಮಾ
ಮಹೇಶ್ ಶರ್ಮಾ
ಬುಲಂದಶಹರ್: ಸ್ವತಃ ದೇವರಿಗೇ ನಿಮ್ಮ ಕೋರಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲವಾದರೆ ಒಬ್ಬ ಸಂಸದ ಹೇಗೆ ನಿಮ್ಮ ಕೋರಿಕೆ ಈಡೇರಿಸಲು ಸಾಧ್ಯ? ಎಂದು ಕೇಂದ್ರ ಸಚಿವ ಮಹೇಶ್ ಶರ್ಮಾ ಅವರು ಜನರನ್ನು ಪ್ರಶ್ನಿಸಿದ್ದಾರೆ.
ಬುಲಂದಶಹರ್ ನಲ್ಲಿ ಬಿಜೆಪಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವ ಮಹೇಶ್ ಶರ್ಮಾ ಅವರು, 'ದೇವರೇ ಅತಿ ದೊಡ್ಡ ಮುರ್ಖ ಎಂಬ ಮಾತನ್ನು ನಾನು ಕೇಳಿದ್ದೇನೆ. ನಮಗೆ ಅನ್ನ, ನೀರು, ಬಟ್ಟೆ, ಮನೆ, ಉದ್ಯೋಗ ಮತ್ತು ನಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದು ನಮ್ಮನ್ನು ಭೂಮಿಗೆ ಕಳುಹಿಸಿದ ಆ ದೇವರ ಜವಾಬ್ದಾರಿ. ಆದರೆ ಇಂದಿಗೂ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಜನರಿಗೆ ತಿನ್ನಲು ಆಹಾರ ಇಲ್ಲ. ಶಾಲೆಗೆ ಹೋಗುವ ಮಕ್ಕಳು ಮಧ್ಯಾಹ್ನ ಬಿಸಿ ಊಟ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಆದರೆ ಉಳಿದವರ ಕಥೆ ಏನು? ನಮ್ಮನ್ನು ಸೃಷ್ಟಿಸಿದ ದೇವರಿಗೆ ನಮ್ಮ ಬಯಕೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ. ಸಂಸದನಿಂದ ಹೇಗೆ ಸಾಧ್ಯ?' ಎಂದಿದ್ದಾರೆ.
ಕಳೆದ ಗುರುವಾರ ಭಜನ್ ಲಾಲ್ ದೇವಸ್ಥಾನದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಸಂಸದ ಮಹೇಶ್ ಶರ್ಮಾ ಅವರು ಜನರ ಮುಂದೆ ತಮ್ಮ ಅಸಹಾಯಕತೆಯನ್ನು ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com