ಆಂಧ್ರ ಪ್ರದೇಶ: ಸಿಆರ್‌ಪಿಎಫ್ ಎನ್ ಕೌಂಟರ್ ಗೆ ಇಬ್ಬರು ಮಾವೋವಾದಿಗಳು ಬಲಿ

ಸಿಆರ್‌ಪಿಎಫ್ ಹಾಗೂ ನಿಷೇಧಿತ ಮಾವೋವಾದಿಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಮಾವೋವಾದಿಗಳು ಹತರಾಗಿದ್ದು ಓರ್ವ ಸಿಆರ್‌ಪಿಎಫ್....

Published: 16th March 2019 12:00 PM  |   Last Updated: 16th March 2019 02:33 AM   |  A+A-


Two Maoists killed in encounter with CRPF in Andhra Pradesh

ಆಂಧ್ರ ಪ್ರದೇಶ: ಸಿಆರ್‌ಪಿಎಫ್ ಎನ್ ಕೌಂಟರ್ ಗೆ ಇಬ್ಬರು ಮಾವೋವಾದಿಗಳು ಬಲಿ

Posted By : RHN RHN
Source : Online Desk
ವಿಶಾಖಪಟ್ಟಣ: ಸಿಆರ್‌ಪಿಎಫ್ ಹಾಗೂ ನಿಷೇಧಿತ ಮಾವೋವಾದಿಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಮಾವೋವಾದಿಗಳು ಹತರಾಗಿದ್ದು ಓರ್ವ ಸಿಆರ್‌ಪಿಎಫ್ ಯೋಧರಿಗೆ ಗಾಯವಾಗಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣ ಜಿಲ್ಲೆ ಪೆಡಬಯಲು ಮಂಡಲದ ಪಿ ಕೊಂಡಪಳ್ಳಿ ಗ್ರಾಮದಲ್ಲಿ  ನಡೆದಿದೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪೆಡಬಯಲು ಮಂಡಲದ ಅರಣ್ಯ ಪ್ರದೇಶದ ಗಡಿಯಲ್ಲಿನ ಗ್ರಾಮಗಳಲ್ಲಿನಿಯೋಜಿಸಲಾದ ಸಿಆರ್‌ಪಿಎಫ್ 198 ಬೆಟಾಲಿಯನ್ ತಂಡ ಮಾವೋವಾದಿಗಳನ್ನು ಎದುರಿಸಿದೆ. ಶನಿವಾರ ಬೆಳಗಿನ ಜಾವ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಮಾವೋವಾದಿಗಳು ಸತ್ತರೆ ಉಳಿದವರು ಕತ್ತಲೆಯಲ್ಲಿ ತಪ್ಪಿಸಿಕೊಂಡಿದ್ದಾರೆ.

ಗಾಯಾಳು ಸಿಆರ್‌ಪಿಎಫ್ ಜವಾನ್ ನನ್ನು ವಿಶಾಖಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಪ್ರದೇಶದಲ್ಲಿ ಕೋಬಿಂಗ್ ಕಾರ್ಯಾಚರಣೆ ಮುಂದುವರಿದಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp