ದುಡ್ಡಿಲ್ಲದ ಯುವಕನೋರ್ವ 'ಎಮರ್ಜೆನ್ಸಿ' ಅಂತ ಪೊಲೀಸರಿಗೆ ಕರೆ ಮಾಡಿದ, ಮುಂದೇನಾಯ್ತು ಈ ವಿಡಿಯೋ ನೋಡಿ!

ಯುವಕನೋರ್ವ ಬಸ್ಸಿನಲ್ಲಿ ಹೋಗಲು ದುಡ್ಡಿಲ್ಲದೆ ಪರದಾಡಿ ಕೊನೆಗೆ ಧೈರ್ಯ ಮಾಡಿ ಪೊಲೀಸರಿಗೆ ಕರೆ ಮಾಡಿದ್ದಾನೆ. ಯುವಕನಿದ್ದ ಸ್ಥಳಕ್ಕೆ ಬಂದ ಪೊಲೀಸರಿಗೆ ವಿಚಿತ್ರ ಪರಿಸ್ಥಿತಿ ಎದುರಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಖನೌ: ಯುವಕನೋರ್ವ ಬಸ್ಸಿನಲ್ಲಿ ಹೋಗಲು ದುಡ್ಡಿಲ್ಲದೆ ಪರದಾಡಿ ಕೊನೆಗೆ ಧೈರ್ಯ ಮಾಡಿ ಪೊಲೀಸರಿಗೆ ಕರೆ ಮಾಡಿದ್ದಾನೆ. ಯುವಕನಿದ್ದ ಸ್ಥಳಕ್ಕೆ ಬಂದ ಪೊಲೀಸರಿಗೆ ವಿಚಿತ್ರ ಪರಿಸ್ಥಿತಿ ಎದುರಾಗಿದೆ.
ಯುವಕನನ್ನು ಭೇಟಿ ಮಾಡಿದ ಉತ್ತರಪ್ರದೇಶ ಪೊಲೀಸರಿಗೆ ಯುವಕ ನಾನು ಮನೆಗೆ ಹೋಗಬೇಕು. ನನ್ನ ಬಳಿ ದುಡ್ಡಿಲ್ಲ ನನಗೆ ಲಿಫ್ಟ್ ಕೊಡಿ ಎಂದು ಕೇಳಿದ್ದಾನೆ. ಇದರಿಂದ ಸ್ವಲ್ಪ ವಿಚಲಿತರಾದ ಪೊಲೀಸರು ಆತ ಡ್ರಗ್ಸ್ ತೆಗೆದುಕೊಂಡಿದ್ದಾನೆ ಎಂದು ಶಂಕಿಸಿ ವಿಚಾರಣೆ ನಡೆಸಿದರು.
ಪೊಲೀಸ್ ಕಂಟ್ರೋಲ್ ರೂಂ 100ಕ್ಕೆ ಕರೆ ಮಾಡಿ ಎಮರ್ಜೆನ್ಸಿ ಎಂದು ತಾನಿದ್ದ ಪ್ರದೇಶಕ್ಕೆ ಕರೆಸಿಕೊಂಡಿದ್ದಾನೆ. ನಂತರ ನನ್ನ ಬಳಿ ಬಸ್ಸಿಗೆ ಹೋಗಲು ದುಡ್ಡಿಲ್ಲ. ನನ್ನನ್ನು ಗುನ್ನೌರ್ ನಲ್ಲಿರುವ ತನ್ನ ಮನೆಗೆ ಬಿಡಬೇಕೆಂದು ಕೇಳಿಕೊಂಡಿದ್ದಾನೆ.
ಬಳಿಕ ಪೊಲೀಸರು ಡ್ರಗ್ಸ್ ತೆಗೆದುಕೊಂಡಿದ್ದಾನಾ ಎಂದು ವಿಚಾರಣೆ ನಡೆಸಿದರು. ಈ ವಿಚಾರಣೆಯನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದು ಇದನ್ನು ಸೌರಭ್ ದ್ವಿವೇದಿ ಎಂಬ ನೆಟಿಗ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಪೊಲೀಸರು ನೀನು ಡ್ರಗ್ಸ್ ತೆಗೆದುಕೊಂಡಿದ್ದೀಯಾ, ನಶೆಯಲ್ಲಿದ್ದೀಯಾ ಎಂದು ಕೇಳಿದರೆ ಆತ ತನ್ನ ಬಳಿ ಹಣವಿಲ್ಲದ ಕಾರಣ ಗುನ್ನೌರ್ ವರೆಗೆ ಲಿಫ್ಟ್ ಬೇಕಿತ್ತು ಎಂದು ಧೈರ್ಯವಾಗಿ ಹೇಳಿದ್ದಾನೆ. ಜತೆಗೆ ತಾನು ಯಾವುದೇ ರೀತಿಯ ಡ್ರಗ್ಸ್ ತೆಗೆದುಕೊಳ್ಳುವುದಿಲ್ಲ. ಕೇವಲ ಚಿಲ್ಲಮ್(ಹುಕ್ಕಾ) ಸೇದುತೇನೆ ಎಂದು ಹೇಳಿಕೊಂಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com