ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಸೂದ್ ಅಜರ್ ವಿಚಾರ: ಶೀಘ್ರ ಗೊಂದಲ ನಿವಾರಣೆಯಾಗಲಿದೆ ಎಂದ ಚೀನಾ

ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಲು ತಡೆವೊಡ್ಡಿದ್ದ ಚೀನಾ ಇದೀಗ ಈ ಗೊಂದಲ ಶೀಘ್ರ ನಿವಾರಣೆಯಾಗಲಿದೆ ಎಂದು ಹೇಳಿದೆ.
ಬೀಜಿಂಗ್: ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಲು ತಡೆವೊಡ್ಡಿದ್ದ ಚೀನಾ ಇದೀಗ ಈ ಗೊಂದಲ ಶೀಘ್ರ ನಿವಾರಣೆಯಾಗಲಿದೆ ಎಂದು ಹೇಳಿದೆ.
ಈ ಬಗ್ಗೆ ಮಾತನಾಡಿದ ಚೀನಾ ರಾಯಭಾರಿ ಲುವೋ ಝಾಹೋಯಿಯಿ ಅವರು, ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸುವ ವಿಚಾರದ ಕುರಿತು ಎದ್ದಿರುವ ಗೊಂದಲ ಶೀಘ್ರ ನಿವಾರಣೆಯಾಗಲಿದೆ ಎಂದು ಹೇಳಿದ್ದಾರೆ. 
ಇಂದು ಹೊಳಿ ಹಬ್ಬದ ಸಂಭ್ರಮಾಚರಣೆ ನಿಮಿತ್ತ ರಾಯಭಾರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲುವೋ ಝಾಹೋಯಿಯಿ, ತಾಂತ್ರಿಕವಾಗಿ ಈ ವಿಚಾರಕ್ಕೆ ತಡೆ ನೀಡಲಾಗಿದೆ. ಅಂದರೆ ಈ ವಿಚಾರವಾಗಿ ವಿಸ್ಮೃತ ಚರ್ಚೆಗೆ ಇನ್ನೂ ಅವಕಾಶವಿದೆ. ಶೀಘ್ರ ಈ ಗೊಂದಲ ನಿವಾರಣೆಯಾಗಲಿದೆ ಎಂದು ಹೇಳಿದರು.
ಕಳೆದ ವಾರದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಾ ಈ ವಿಚಾರಕ್ಕೆ ತಡೆವೊಡ್ಡಿತ್ತು. ಪುಲ್ವಾಮ ವಿಚಾರ ಮುಂದಿಟ್ಟುಕೊಂಡು ಭಾರತ ಈ ವಿಚಾರ ಪ್ರಸ್ತಾಪ ಮಾಡುತ್ತಿದ್ದಂತೆಯೇ ಇದಕ್ಕೆ ಚೀನಾ ತಡೆವೊಡ್ಡಿತ್ತು. ದಶಕಗಳಿಂದಲೂ ಭಾರತದ ಈ ಪ್ರಸ್ತಾಪಕ್ಕೆ ಚೀನಾ ತಡೆವೊಡ್ಡುತ್ತಾ ಬಂದಿದ್ದು, ಇದು ನಾಲ್ಕನೇ ಬಾರಿಗೆ ಚೀನಾ ಮತ್ತೆ ತಡೆವೊಡ್ಡಿದೆ.
ಇನ್ನು ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಲು ಫ್ರಾನ್ಸ್, ಅಮೆರಿಕ ಮತ್ತು ಬ್ರಿಟನ್ ದೇಶಗಳು ಬೆಂಬಲ ಸೂಚಿಸಿದ್ದು, ಚೀನಾ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಇದೇ ಕಾರಣಕ್ಕೆ ವಿಶ್ವಸಂಸ್ಥೆಯಲ್ಲಿ ಬಹಿರಂಗ ಚರ್ಚೆಗೆ ಆಗ್ರಹಿಸಿವೆ.

Related Stories

No stories found.

Advertisement

X
Kannada Prabha
www.kannadaprabha.com