ಮತ್ತೆ ನಕ್ಸಲರ ಅಟ್ಟಹಾಸ: 5 ಸಿಆರ್ ಪಿಎಫ್ ಯೋಧರಿಗೆ ಗಾಯ, ಓರ್ವ ಹುತಾತ್ಮ

ಛತ್ತೀಸ್ ಗಢದ ದಾಂತೇವಾಡದಲ್ಲಿ ಮತ್ತೆ ಮಾವೋವಾದಿಗಳು ಅಟ್ಟಹಾಸ ಮೆರೆದಿದ್ದು, 5 ಸಿಆರ್ ಪಿಎಫ್ ಯೋಧರಿಗೆ ಗಾಯವಾಗಿದ್ದರೆ ಓರ್ವ ಸಿಆರ್ ಪಿಎಫ್ ಯೋಧ ಹುತಾತ್ಮನರಾಗಿದ್ದಾರೆ.

Published: 18th March 2019 12:00 PM  |   Last Updated: 18th March 2019 10:46 AM   |  A+A-


5 CRPF jawans injured in Maoist attack

ಮತ್ತೆ ನಕ್ಸಲರ ಅಟ್ಟಹಾಸ: 5 ಸಿಆರ್ ಪಿಎಫ್ ಯೋಧರಿಗೆ ಗಾಯ, ಓರ್ವ ಹುತಾತ್ಮ

Posted By : SBV SBV
Source : Online Desk
ದಾಂತೇವಾಡ: ಛತ್ತೀಸ್ ಗಢದ ದಾಂತೇವಾಡದಲ್ಲಿ ಮತ್ತೆ ಮಾವೋವಾದಿಗಳು ಅಟ್ಟಹಾಸ ಮೆರೆದಿದ್ದು, 5 ಸಿಆರ್ ಪಿಎಫ್ ಯೋಧರಿಗೆ ಗಾಯವಾಗಿದ್ದರೆ ಓರ್ವ ಸಿಆರ್ ಪಿಎಫ್ ಯೋಧ ಹುತಾತ್ಮನರಾಗಿದ್ದಾರೆ. 

ಸುಧಾರಿತ ಸ್ಫೋಟಕ ಸಾಧನ ಬಳಸಿ ಮಾವೋವಾದಿಗಳು  ಈ ದಾಳಿ ನಡೆಸಿದ್ದು, ಸಿಆರ್ ಪಿಎಫ್ ನ ಕಮಲ್ ಪೋಸ್ಟ್ ನಲ್ಲಿ ಈ ಘಟನೆ ನಡೆದಿದೆ.

ಐಇಡಿ ಸ್ಫೋಟಿಸುವುದಷ್ಟೇ ಅಲ್ಲದೇ 231 ಬೆಟಾಲಿಯನ್ ನ ಸಿಬ್ಬಂದಿಗಳ ಮೇಲೆ ಮಾವೋವಾದಿಗಳು ಗುಂಡಿನ ದಾಳಿಯನ್ನೂ ನಡೆಸಿದ್ದು, ಈ ಘಟನೆಯಲ್ಲಿ ಓರ್ವ ಮುಖ್ಯಪೇದೆ ಮೃತಪಟ್ಟಿದ್ದಾರೆ. 

ಮಾವೋವಾದಿಗಳ ಗುಂಡಿನ ದಾಳಿಗೆ ಸಿಆರ್ ಪಿಎಫ್ ಪ್ರತಿದಾಳಿ ನಡೆಸಿದ್ದು, ಗುಂಡಿನ ಚಕಮಕಿ ಮುಂದುವರೆದಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp