ನೀರವ್ ಮೋದಿ ವಿರುದ್ಧ ಲಂಡನ್ ಕೋರ್ಟ್ ನಿಂದ ಬಂಧನ ವಾರೆಂಟ್ ಜಾರಿ: ಶೀಘ್ರವೇ ವಶಕ್ಕೆ ಸಾಧ್ಯತೆ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ್ದ ಉದ್ಯಮಿ ನೀರವ್ ಮೋದಿ ವಿರುದ್ಧ ಲಂಡನ್ ಕೋರ್ಟ್ ಬಂಧನ ವಾರೆಂಟ್ ಜಾರಿಗೊಳಿಸಿದೆ.

Published: 18th March 2019 12:00 PM  |   Last Updated: 18th March 2019 11:32 AM   |  A+A-


ನೀರವ್ ಮೋದಿ ವಿರುದ್ಧ ಲಂಡನ್ ಕೋರ್ಟ್ ನಿಂದ ಬಂಧನ ವಾರೆಂಟ್ ಜಾರಿ: ಶೀಘ್ರವೇ ವಶಕ್ಕೆ ಸಾಧ್ಯತೆ

Arrest Warrant Issued Against Nirav Modi By London Court, Likely to be Taken Into Custody Soon

Posted By : SBV SBV
Source : PTI
ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ್ದ ಉದ್ಯಮಿ ನೀರವ್ ಮೋದಿ ವಿರುದ್ಧ ಲಂಡನ್ ಕೋರ್ಟ್ ಬಂಧನ ವಾರೆಂಟ್ ಜಾರಿಗೊಳಿಸಿದೆ. 

ಭಾರತದ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನೀರವ್ ಮೋದಿಯನ್ನು ಗಡಿಪಾರು ಮಾಡುವುದಕ್ಕೆ  ಮನವಿ ಮಾಡಿತ್ತು. ಭಾರತದ ಅಧಿಕಾರಿಗಳಿಗೆ ಮೊದಲ ಹಂತದ ಯಶಸ್ಸು ದೊರೆತಿದ್ದು ಲಂಡನ್ ಕೋರ್ಟ್ ನೀರವ್ ಮೋದಿ ವಿರುದ್ಧ ಬಂಧನ ವಾರೆಂಟ್ ಜಾರಿಗೊಳಿಸಿದೆ. 

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸುಮಾರು 13,000 ಕೋಟಿ ರೂಪಾಯಿಗಳನ್ನು ವಂಚಿಸಿದ್ದ ನೀರವ್ ಮೋದಿ ಇತ್ತೀಚೆಗಷ್ಟೇ ಲಂಡನ್ ನಲ್ಲಿ ವರದಿಯಾಗಿತ್ತು. ಲಂಡನ್ ನ ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ನೀರವ್ ಮೋದಿ ವಿರುದ್ಧ ಜಾರಿಗೊಳಿಸಲಾದ ಬಂಧನ ವಾರೆಂಟ್ ಕುರಿತ ಮಾಹಿತಿ ಭಾರತದ ಅಧಿಕಾರಿಗಳಿಗೆ ಲಭ್ಯವಾಗಿದ್ದು, ಆತನನ್ನು ಶೀಘ್ರವೇ ವಶಕ್ಕೆ ಒಪ್ಪಿಸುವ ಸಾಧ್ಯತೆ ಇದೆ. 

ಇದೇ ವೇಳೆ ನೀರವ್ ಮೋದಿ ಕೋರ್ಟ್ ಎದುರು ಹಾಜರಾಗಬೇಕಿತ್ತು, ಆತನ ಗಡಿಪಾರು ಪ್ರಕ್ರಿಯೆ ನಂತರದಲ್ಲಿ ಪ್ರಾರಂಭವಾಗಲಿದೆ. 
Stay up to date on all the latest ರಾಷ್ಟ್ರೀಯ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp