ಸಕಲ ಸರ್ಕಾರಿ ಗೌರವಗಳೊಂದಿಗೆ ಸಂಜೆ 5ಕ್ಕೆ ಮನೋಹರ್ ಪರಿಕ್ಕರ್ ಅಂತ್ಯ ಸಂಸ್ಕಾರ!

ನಿನ್ನೆ ವಿಧಿವಶರಾದ ಗೋವಾ ಸಿಎಂ ದಿ. ಮನೋಹರ್ ಪರಿಕ್ಕರ್ ಅವರ ಅಂತ್ಯ ಸಂಸ್ಕಾರವನ್ನು ಇಂದು ಸಂಜೆ 5 ಗಂಟೆಗೆ ಪಣಜಿಯಲ್ಲಿ ನೆರವೇರಿಸಲಾಗುತ್ತದೆ.
ಮನೋಹರ್ ಪರಿಕ್ಕರ್
ಮನೋಹರ್ ಪರಿಕ್ಕರ್
ಪಣಜಿ: ನಿನ್ನೆ ವಿಧಿವಶರಾದ ಗೋವಾ ಸಿಎಂ ದಿ. ಮನೋಹರ್ ಪರಿಕ್ಕರ್ ಅವರ ಅಂತ್ಯ ಸಂಸ್ಕಾರವನ್ನು ಇಂದು ಸಂಜೆ 5 ಗಂಟೆಗೆ ಪಣಜಿಯಲ್ಲಿ ನೆರವೇರಿಸಲಾಗುತ್ತದೆ.
ಸುದೀರ್ಘಾವಧಿಯ ಅನಾರೋಗ್ಯದಿಂದ ಭಾನುವಾರ ವಿಧಿವಶರಾದ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅಂತ್ಯಕ್ರಿಯೆ ಇಂದು ನೆರವೇರಲಿದೆ. ಭಾನುವಾರ ಸಂಜೆ 06:40ಕ್ಕೆ ವಿಧಿವಶರಾದ ಅವರು ಅಂತಿಮ ಸಂಸ್ಕಾರ ಇಲ್ಲಿನ ಮಿರಾಮಾರ್ ನಲ್ಲಿ ನೆರವೇರಿಸಲಾಗುತ್ತದೆ ಎಂದು ಬಿಜೆಪಿ ವಕ್ತಾರರು ಮಾಹಿತಿ ನೀಡಿದ್ದಾರೆ.
ಪರಿಕರ್ ಪಾರ್ಥಿವ ಶರೀರವನ್ನು ಸೋಮವಾರ ಬೆಳಿಗ್ಗೆ 9:00 ರಿಂದ 10:30ರವರೆಗೆ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಇರಿಸಲಾಗುವುದು. ಬಳಿಕ ಸಂಜೆ 4 ಗಂಟೆವರೆಗೆ ಪಣಜಿಯ ಕಲಾ ಅಕಾಡೆಮಿಯಲ್ಲಿ  ಸಾರ್ವಜನಿಕರ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಸಂಜೆ 4 ಗಂಟೆಗೆ, ಸಕಲ ಗೌರವಗಳೊಂದಿಗೆ ಪರಿಕ್ಕರ್ ಅವರ ಅಂತಿಮ ಯಾತ್ರೆ ಮೆರವಣಿಗೆ ಮೂಲಕ ನಡೆಯಲಿದ್ದು, ಸಂಜೆ 5 ಗಂಟೆಗೆ ಪಣಜಿಯಲ್ಲಿರುವ ಮೀರಾಮಾರ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಇನ್ನು ಪರಿಕ್ಕರ್ ಅಂತ್ಯಕ್ರಿಯೆಯಲ್ಲಿ ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಗೃಹ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಬಿಜೆಪಿಯ ಪ್ರಮುಖ ಮುಖಂಡರು ಪಾಲ್ಗೊಳ್ಳುವ ಸಾಧ್ಯತೆ ಇದೆ.
ಪರಿಕರ್ (63 ವರ್ಷ) ಫೆಬ್ರವರಿ 2018 ರಿಂದ ಪ್ಯಾಂಕ್ರಿಯಾಟಿಕ್ ಖಾಯಿಲೆಯಿಂದ ಬಳಲುತ್ತಿದ್ದರು. ಬಿಜೆಪಿ ಹಿರಿಯ ನಾಯಕನ ಆರೋಗ್ಯ ಕಳೆದೆರಡು ದಿನಗಳಿಂದ ತೀವ್ರ ಹದಗೆಟ್ಟಿತ್ತು. ಶನಿವಾರ ಬೆಳಿಗ್ಗೆ ಪರ್ರಿಕರರ ರಕ್ತದೊತ್ತಡಲ್ಲಿ ದಿಢೀರ್ ಏರುಪೇರಾಗಿತ್ತು, ಕೆಲ ಹೊತ್ತಿನ ನಂತರ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಸಿಎಂ ಕಚೇರಿ ಮಾಹಿತಿ ನೀಡಿತ್ತು. ಆದರೆ ಶನಿವಾರ ರಾತ್ರಿ ಇದ್ದಕ್ಕಿದ್ದಂತೆ ಆರೋಗ್ಯ ತೀರಾ ಹದಗೆಟ್ಟ ಕಾರಣ ಅವರಿಗೆ ಜೀವರಕ್ಷಕ ಸಾಧನಗಳ ನೆರವು ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮನೋಹರ್ ಪರಿಕರ್ ನಮ್ಮನ್ನೆಲ್ಲ ಅಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com