ಪರಿಕ್ಕರ್ ಪಾರ್ಥಿವ ಶರೀರ ದರ್ಶನ ಪಡೆದ ಪ್ರಧಾನಿ ಮೋದಿ

ಭಾನುವಾರ ಅಸುನೀಗಿದ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರ ಅಂತಿಮ ದರ್ಶನ ಪಡೆದು ಗೌರವ ಸೂಚಿಸಲು ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ.

Published: 18th March 2019 12:00 PM  |   Last Updated: 18th March 2019 03:45 AM   |  A+A-


PM pays homage to Parrikar, meets family

ಪರಿಕ್ಕರ್ ಪಾರ್ಥಿವ ಶರೀರ ದರ್ಶನ ಪಡೆದ ಪ್ರಧಾನಿ ಮೋದಿ

Posted By : RHN RHN
Source : ANI
ಪಣಜಿ: ಭಾನುವಾರ ಅಸುನೀಗಿದ ಗೋವಾ ಸಿಎಂ ಮನೋಹರ್ ಪರಿಕ್ಕರ್  ಅವರ ಅಂತಿಮ ದರ್ಶನ ಪಡೆದು ಗೌರವ ಸೂಚಿಸಲು ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಗೋವಾದ ಪಣಜಿ ಕಲಾ ಅಕಾಡಮಿಗೆ ಪ್ರಧಾನಿ ಮೋದಿ ಆಗಮಿಸಿಪರಿಕ್ಕರ್ ಪಾರ್ಥಿವ ಶರೀರದ ದರ್ಶನ ಪಡೆಇದ್ದಾರೆ.

ಪರಿಕ್ಕರ್ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳೀದ ಪ್ರಧಾನಿ ಮೋದಿ ಅವರಿಗೆ ಗೋವಾ ರಾಜ್ಯಪಾಲ ಮೃದುಲಾ ಸಿನ್ಹಾ, ಕೇಂದ್ರ ಸಚಿವರಾಗ ಸ್ಮೃತಿ ಇಇರಾನಿ, ನಿರ್ಮಲಾ ಸೀತಾರಾಮನ್ ಹಾಗೂ ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಸಾಥ್ ನೀಡಿದ್ದಾರೆ. ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸದ್ಯವೇ ಆಗಮಿಸುವ ನಿರೀಕ್ಷೆ ಇದೆ.
63 ವರ್ಷದ ಪರಿಕ್ಕರ್  ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಡನೆ ಸೋಮವಾರ ಸಂಜೆ ನೆರವೇರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಬಿಜೆ[ಪಿ ಕಛೇರಿಯಲ್ಲಿ ಸಾರ್ವಜನಿಕರು ತಮ್ಮ ನಾಯಕನಿಗೆ ಅಂತಿಮ ನಮನ ಸಲ್ಲಿಸಲು ಜಮಾಯಿಸಿದ್ದರು. ದೇಶದ ರಕ್ಷಣಾ ಸಚಿವರೂ ಆಗಿದ್ದ ತಮ್ಮ ರಾಜ್ಯದ ಮುಖ್ಯಂತ್ರಿ, ಜನನಾಯಕನನ್ನು ದರ್ಶಿಸಲು ಸಾವಿರ ಸಾವಿರ ಸಂಖೆಯಲ್ಲಿ ಜನ ಜಮಾಯಿಸಿದ್ದು ಪೋಲೀಸರಿಗೆ ಜನರ ನಿಯಂತ್ರಿಸಲು ಹರಸಆಹಸ ಪಡಬೇಕಾಯಿತು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp