ಮಾರ್ಚ್ 31,'ಮೈನ್ ಭೀ ಚೌಕಿದಾರ್‌ 'ಬೆಂಬಲಿಗರೊಂದಿಗೆ ಪ್ರಧಾನಿ ಸಂವಾದ- ರವಿಶಂಕರ್ ಪ್ರಸಾದ್

ಮಾರ್ಚ್ 31 ರಂದು ಮೈನ್ ಭೀ ಚೌಕಿದಾರ್ ಪ್ರಚಾರಾಂದೋಲನದಲ್ಲಿ ತೊಡಗಿಸಿಕೊಂಡಿರುವ ಬೆಂಬಲಿಗರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಲಿದ್ದಾರೆ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ರವಿಶಂಕರ್ ಪ್ರಸಾದ್
ರವಿಶಂಕರ್ ಪ್ರಸಾದ್

ನವದೆಹಲಿ: ಮಾರ್ಚ್ 31 ರಂದು ಮೈನ್ ಭೀ ಚೌಕಿದಾರ್ ಪ್ರಚಾರಾಂದೋಲನದಲ್ಲಿ ತೊಡಗಿಸಿಕೊಂಡಿರುವ ಬೆಂಬಲಿಗರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಲಿದ್ದಾರೆ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ಮೈನ್ ಭೀ ಚೌಕಿದಾರ್  ಪ್ರಚಾರಾಂದೋಲನ ಯಶಸ್ಸಿನಿಂದಾಗಿ ಸಂತೋಷಗೊಂಡಿರುವ ಪ್ರಧಾನಿ ಮೋದಿ ಅಂದು ದೇಶದ 500 ಸ್ಥಳಗಳಲ್ಲಿ ವಿಡಿಯೋ  ಕಾನ್ಫರೆನ್ಸ್ ಮೂಲಕ  ಸಂವಾದ ನಡೆಸಲಿದ್ದಾರೆ ಎಂದು ಹೇಳಿದರು.

ಮೈನ್ ಭೀ ಚೌಕಿದಾರ್ ಪ್ರಚಾರ ಜನಾಂದೋಲನವಾಗಿ ರೂಪುಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಜಾಗತಿಕವಾಗಿ ಟ್ರೆಂಡಿಂಗ್ ಆಗಿದೆ. 20 ಲಕ್ಷ ಜನರು ಅದಕ್ಕೆ ಟ್ವೀಟ್ ಮಾಡಿದ್ದಾರೆ.ಸಾಮಾಜಿಕ ಮಾಧ್ಯಮಗಳು ಹಾಗೂ ನಮೋ ಆಪ್ ಮೂಲಕ 1 ಕೋಟಿ ಜನರು ಪ್ರತಿಕ್ರಿಯಿಸಿದ್ದಾರೆ ಎಂದು ರವಿಶಂಕರ್ ಪ್ರಸಾದ್ ತಿಳಿಸಿದರು.

ಈ ಪ್ರಚಾರಾಂದೋಲನ ಟೀಕಿಸುವವರ ಬಗ್ಗೆ ಮಮಾತನಾಡಿದ ರವಿಶಂಕರ್ ಪ್ರಸಾದ್, ಚೌಕಿದಾರ್ ಶ್ರೀಮಂತಿರಿಗಾಗಿ ಎಂದು ಕೆಲವರು ಹೇಳುತ್ತಿದ್ದಾರೆ. ಇದೇ ಜನರು  ಬಡ ಜನರ 12 ಲಕ್ಷ ಕೋಟಿ ಹಣವನ್ನು ದೋಚಿಸಿದ್ದಾರೆ.ಅಂತಹವರು ಹೇಗೆ ಟೀಕೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಭಾನುವಾರ ತಮ್ಮ ಟ್ವೀಟರ್ ಖಾತೆಯನ್ನು ಚೌಕಿದಾರ್ ನರೇಂದ್ರ ಮೋದಿ ಎಂದು ಬದಲಾಯಿಸಿಕೊಂಡಿದ್ದರು. ನಂತರ ಕೇಂದ್ರ ಸಚಿವರು, ಬಿಜೆಪಿ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳು, ಕರ್ನಾಟಕದಲ್ಲಿ ಬಿಜೆಪಿ ಮುಖಂಡರು,ಪಕ್ಷದ ಕಾರ್ಯಕರ್ತರು ಕೂಡಾ ತಮ್ಮ ಟ್ವಿಟರ್ ಖಾತೆಯಲ್ಲಿ ಹೆಸರಿನ ಮುಂದೆ ಚೌಕಿದಾರ್ ಎಂದು ಬದಲಾಯಿಸಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com