ಪತ್ರಕರ್ತೆ ಬರ್ಖಾ ದತ್ ಗೆ ಕಿರುಕುಳ ನೀಡಿದ್ದ ನಾಲ್ವರ ಬಂಧನ

ಸಾಮಾಜಿಕ ತಾಣದ ಮುಖೇನ ಪತ್ರಕತ್ರೆ ಬಖಾ ದತ್ ಅವರಿಗೆ ಅಶ್ಲೀಲ,ಸಂದೇಶ ರವಾನಿಸಿದ್ದ ನಾಲ್ವರನ್ನು ದೆಹಲಿಯ ಸೈಬರ್ ಕ್ರೈಂ ಪೋಲೀಸರು ಬಂಧಿಸಿದ್ದಾರೆ.

Published: 20th March 2019 12:00 PM  |   Last Updated: 20th March 2019 01:58 AM   |  A+A-


Barkha Dutt

ಬರ್ಖಾ ದತ್

Posted By : RHN RHN
Source : The New Indian Express
ನವದೆಹಲಿ: ಸಾಮಾಜಿಕ ತಾಣದ ಮುಖೇನ ಪತ್ರಕತ್ರೆ ಬಖಾ ದತ್ ಅವರಿಗೆ ಅಶ್ಲೀಲ,ಸಂದೇಶ ರವಾನಿಸಿದ್ದ ನಾಲ್ವರನ್ನು ದೆಹಲಿಯ ಸೈಬರ್ ಕ್ರೈಂ ಪೋಲೀಸರು ಬಂಧಿಸಿದ್ದಾರೆ.

ಅನಾಮಧೇಯ ಜನರ ಬೆದರಿಕೆ ಕರೆಗಳು ಮತ್ತು ಅಶ್ಲೀಲ ಸಂದೇಶಗಳನ್ನು ಸ್ವೀಕರಿಸಿದ ಬಳಿಕ ಬರ್ಖಾ ದತ್ ಫೆಬ್ರವರಿ 21ರಂದು ದೆಹಲಿ ಸೈಬರ್ ಕ್ರೈಂ ಪೋಲೀಸರಲ್ಲಿ ಎಫ್ಐಆರ್ ದಾಖಲಿಸಿದ್ದರು.
ದತ್ ಸ್ವತಃ ಆಪಾದಿತರ ಬಂಧನವನ್ನು ಖಾತ್ರಿಪಡಿಸಿದ್ದಾರೆ.ದೆಹಲಿಯಿಂದ ರಾಜೀವ್ ಶರ್ಮಾ (23), ಹೇಮರಾಜ್ ಕುಮಾರ್ (31) ದಿತ್ಯ ಕುಮಾರ್ (34) ಮತ್ತು ಶಬ್ಬೀರ್ ರ್ಫಾನ್ ಪಿಂಜರಿ (45) ಅವರುಗಳನ್ನು ಪೋಲೀಸರು ಬಂಧಿಸಿದ್ದಾರೆ. ಇದರಲ್ಲಿ ಮೊದಲ ಮೂವರು ಆರೋಪಿಗಳು ದೆಹಲಿಯವರಾದರೆ ಕಡೆಯ ಆರೋಪಿ ಶಬ್ಬೀರ್ ಮಾತ್ರ್ ಸೂರತ್  ಮೂಲದವನಾಗಿದ್ದ.ನೆಂದು ಪೋಲೀಸರು ಮಾಹಿತಿ ನೀಡಿದ್ದಾರೆ.

ಐಪಿಸಿ ಸೆಕ್ಷನ್ 354-ಡಿ (ಹಿಂಬಾಲಿಸುವುದು), 506 (ಬೆದರಿಕೆ), 507 (ಕ್ರಿಮಿನಲ್ ಬೆದರಿಕೆ) ಮತ್ತು 120-ಬಿ (ಕ್ರಿಮಿನಲ್ ಪಿತೂರಿ) ಮತ್ತು ಸೈಬರ್ ಕಾಯ್ದೆ ಸೆಕ್ಷನ್ 67 ಮತ್ತು 67-ಎ ಅಡಿಯಲ್ಲಿ  ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಪುಲ್ವಾಮಾ ಭಯೋತ್ಪಾದನಾ ದಾಳಿ ನಂತರ ದೇಶಾದ್ಯಂತ ಜನರಿಂದ ಹಲ್ಲೆಗೊಳಗಾಗುತ್ತಿದ್ದ ಕಾಶ್ಮೀರಿ ಯುವಕರ ರಕ್ಷಣೆಗೆ ಸಂಬಂಧಿಸಿ ಬರ್ಖಾ ದತ್ ಟ್ವೀಟ್ ಮಾಡಿದ್ದರು. ಆಬಳಿಕ ಆಕೆಗೆ ಬೆದರಿಕೆ ಕರೆ, ಅಶ್ಲೀಲ ಸಂದೇಶಗಳು ಬರಲು ಪ್ರಾರಂಬವಾಗಿತ್ತು. ಈ ವಿಷಯದಲ್ಲಿ ಶೀಘ್ರ ತನಿಖೆ ನಡೆಸಲು ರಾಷ್ಟ್ರೀಯ ಮಹಿಳಾ ಆಯೋಗ ದೆಹಲಿ ಪೋಲೀಸ್ ಕಮಿಷನರ್ ಗೆ ಒತ್ತಾಯಿಸಿತ್ತು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp