ಜನರು ಮೂರ್ಖರೆಂದು ಭಾವಿಸಬೇಬೇಡಿ: ಪ್ರಧಾನಿ ಮೋದಿಗೆ ಪ್ರಿಯಾಂಕಾ ಕಿವಿಮಾತು

ಜನರು ಮೂರ್ಖರೆಂದು ಪ್ರಧಾನಿಗಳು ತಿಳಿಯಬೇಕಾಗಿಲ್ಲ, ಅವರು ಹಾಗೆ ಆಲೋಚಿಸುವುದನ್ನು ಮೊದಲು ಬಿಡಲಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ  ವಾದ್ರಾ
ಪ್ರಿಯಾಂಕಾ ಗಾಂಧಿ ವಾದ್ರಾ
ಮಿರ್ಜಾಪುರ: ಜನರು ಮೂರ್ಖರೆಂದು ಪ್ರಧಾನಿಗಳು ತಿಳಿಯಬೇಕಾಗಿಲ್ಲ, ಅವರು ಹಾಗೆ ಆಲೋಚಿಸುವುದನ್ನು ಮೊದಲು ಬಿಡಲಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ  ವಾದ್ರಾ ಹೇಳಿದ್ದಾರೆ. ವಂಶಾಡಳಿತದಿಂದ ಸಾರ್ವಜನಿಕ ಸಂಸ್ಥೆಗಳಿಗೆ ತೀವ್ರ ಕುಂದುಂಟಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಗೆ ಪೂರ್ವ ಉತ್ತರಪ್ರದೇಶದ ಜವಾಬ್ದಾರಿ ಹೊತ್ತಿರುವ ಪ್ರಿಯಾಂಕಾ ತಿರುಗೇಟು ನೀಡಿದ್ದಾರೆ.
ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಪ್ರಿಯಾಂಕಾ, “ಮಾಧ್ಯಮಗಳೂ ಸೇರಿದಂತೆ ಎಲ್ಲ ಸಾರ್ವಜನಿಕ ಸಂಸ್ಥೆಗಳ ಮೇಲೆ ಬಿಜೆಪಿ ಕಳೆದ 5 ವರ್ಷ ವ್ಯವಸ್ಥಿತ ದಾಳಿ ನಡೆಸಿದೆ. ನನಗಿಂತ ಹೆಚ್ಚಾಗಿ ಜನರು ಈ ವಿಷಯವನ್ನು ಚೆನ್ನಾಗಿ ಬಲ್ಲರು. ಆದ್ದರಿಂದ ಪ್ರಧಾನಿ ಮೋದಿಯವರು ಜನರು ಮೂರ್ಖರೆಂದು ಭಾವಿಸುವುದು ಬೇಡ” ಎಂದು ಟೀಕಿಸಿದರು.
‘ಗಂಗಾ     ಯಾತ್ರೆ’ಯ ಭಾಗವಾಗಿ ಪ್ರಯಾಗ್ ರಾಜ್ ಮತ್ತು ಮಿರ್ಜಾಪುರ ಜಿಲ್ಲೆಯ ನಡುವೆ 140 ಕಿ.ಮೀ ದೋಣಿ ಪ್ರಯಾಣ ಕೈಗೊಂಡಿರುವ ಪ್ರಿಯಾಂಕಾ, ನದಿತೀರದ ಜನರನ್ನು ಸಂಪರ್ಕಿಸಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ಕೋರಿದ್ದಾರೆ. 
“ವಂಶಾಡಳಿತದಿಂದಾಗಿ ಪತ್ರಿಕೋದ್ಯಮದಿಂದ ಸಂಸತ್‍ವರೆಗೆ, ಸೈನಿಕರಿಂದ ಹಿಡಿದು ವಾಕ್‍ ಸ್ವಾತಂತ್ರ್ಯದ ವರೆಗೆ, ಸಾಂವಿಧಾನದಿಂದ ಹಿಡಿದು ನ್ಯಾಯಾಲಯದವರೆಗೆ ಎಲ್ಲದರಲ್ಲೂ ಕುಂದು ಉಂಟಾಗಲಿದೆ' ಎಂದು ಮೋದಿ ಟ್ವೀಟ್ ಮಾಡಿದ್ದರು.
ಮುಕ್ತ ಪತ್ರಿಕೋದ್ಯಮದಿಂದ ವಂಶಾಡಳಿತ ಪಕ್ಷಗಳಿಗೆ ನೆಮ್ಮದಿ ಇರುವುದಿಲ್ಲ. ಹೀಗಾಗಿಯೇ ವಾಕ್‍ ಸ್ವಾತಂತ್ರ್ಯವನ್ನು ಹತ್ತಿಕ್ಕಲೆಂದೇ ಕಾಂಗ್ರೆಸ್‍ ಸರ್ಕಾರ ಮೊದಲ ಸಾಂವಿಧಾನಿಕ ತಿದ್ದುಪಡಿ ಮಸೂದೆ ಜಾರಿಗೊಳಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ. ಅವಹೇಳನಕಾರಿ ಎನಿಸುವ ಯಾವುದೇ ವಿಷಯವನ್ನು ಸಾಮಾಜಿಕ ಮಾಧ್ಯಮಗಳಿಗೆ ಪೋಸ್ಟ್ ಮಾಡಿದರೆ ಜೈಲಿಗೆ ತರುವ ಕಾನೂನು ಯುಪಿಎ ಸರ್ಕಾರ ಜಾರಿಗೊಳಿಸಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಬ್ಲಾಗ್ ನಲ್ಲಿ ಬರೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com