ಭಾರತ-ಪಾಕ್ ಗಡಿಯಿಂದ 90 ಕಿ.ಮೀ ದೂರದ ಸಿಂಧ್ ನಲ್ಲಿ ಚೀನಾ ಸೇನೆ ನಿಯೋಜನೆ!

ಭಾರತ-ಪಾಕಿಸ್ತಾನ ಗಡಿಯಿಂದ 90 ಕಿ.ಮೀ ದೂರದ ಸಿಂಧ್ ನಲ್ಲಿ ಚೀನಾ ತನ್ನ ಸೇನೆಯನ್ನು ನಿಯೋಜಿಸಿದೆ.
ಭಾರತ-ಪಾಕ್ ಗಡಿಯಿಂದ 90 ಕಿ.ಮೀ ದೂರದ ಸಿಂಧ್ ನಲ್ಲಿ ಚೀನಾ ಸೇನೆ ನಿಯೋಜನೆ!
ಭಾರತ-ಪಾಕ್ ಗಡಿಯಿಂದ 90 ಕಿ.ಮೀ ದೂರದ ಸಿಂಧ್ ನಲ್ಲಿ ಚೀನಾ ಸೇನೆ ನಿಯೋಜನೆ!
ಥಾರ್: ಭಾರತ-ಪಾಕಿಸ್ತಾನ ಗಡಿಯಿಂದ 90 ಕಿ.ಮೀ ದೂರದ ಸಿಂಧ್ ನಲ್ಲಿ ಚೀನಾ ತನ್ನ ಸೇನೆಯನ್ನು ನಿಯೋಜಿಸಿದೆ. 
ಚೀನಾ ಪಾಕಿಸ್ತಾನದ ಬಲೂಚಿಸ್ಥಾನ ಪ್ರಾಂತ್ಯದಲ್ಲಿ ನಿರ್ಮಾಣವಾಗುತ್ತಿರುವ ಚೀನಾ-ಪಾಕಿಸ್ತಾನ್ ಎಕನಾಮಿಕ್ ಕಾರಿಡಾರ್ ಗೆ ಹೂಡಿಕೆ ಮಾಡಿದೆ. ಪುಲ್ವಾಮ ದಾಳಿಯ ಬೆನ್ನಲ್ಲೇ ಭಾರತ-ಪಾಕಿಸ್ತಾನ ನಡುವೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವುದು ಈಗ ಚೀನಾಗೆ ತಲೆನೋವಾಗಿ ಪರಿಣಮಿಸಿದೆ. ಈ ಬೆನ್ನಲ್ಲೇ ಸಿಪಿಇಸಿ ರಕ್ಷಣೆಗಾಗಿ ಚೀನಾ ಭಾರತ-ಪಾಕಿಸ್ತಾನ ಗಡಿಯಿಂದ 90 ಕಿ.ಮೀ ದೂರದ ಸಿಂಧ್ ನಲ್ಲಿ ತನ್ನ ಸೇನೆಯನ್ನು ನಿಯೋಜನೆ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
ಸಿಂಧ್ ಪ್ರಾಂತ್ಯದ ಥಾರ್  ಕಲ್ಲಿದ್ದಲು ಗಣಿ ಇದ್ದು, ಈ ಪ್ರದೇಶ ಭಾರತ-ಪಾಕಿಸ್ತಾನದ ಗಡಿಯಿಂದ ಕೇವಲ 90 ಕಿ.ಮೀ ದೂರದಲ್ಲಿದೆ. ಸಿಂಧ್ ಪ್ರಾಂತ್ಯದಲ್ಲಿ ಸಿಪಿಇಸಿ ಯೋಜನೆಯಲ್ಲಿ ಹಲವು ಕಾಮಗಾರಿಗಳು ನಡೆಯುತ್ತಿದ್ದು, ಇವುಗಳಿಗೆ ಸ್ಥಳೀಯರಿಂದಲೂ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಭಾರತ-ಪಾಕಿಸ್ತಾನದ ಪ್ರಾಂತ್ಯದಲ್ಲಿ ನಿಯೋಜನೆಯಾಗಿರುವ ಪಡೆಗಳು ಚೀನಾ ಸಿಬ್ಬಂದಿಗಳ ಚಲನವಲನಗಳನ್ನು ಗಮನಿಸುತ್ತಿದೆ. 
ಸಿಪಿಇಸಿ ಯೋಜನೆಯ ಕಾವಲಿಗಾಗಿ ಪಾಕಿಸ್ತಾನ ಈಗಾಗಲೇ 17,000 ಸಿಬ್ಬಂದಿಗಳ ನ್ನು ನಿಯೋಜನೆ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com