ಬಾಲಾಕೋಟ್ ವಾಯುದಾಳಿ ಪ್ರಶ್ನಿಸಿದ ಸ್ಯಾಮ್ ಪಿತ್ರೋಡಾ,ಭಾರತೀಯರು ಕ್ಷಮಿಸಲ್ಲ- ಪ್ರಧಾನಿ ಮೋದಿ
Published: 22nd March 2019 12:00 PM | Last Updated: 22nd March 2019 01:02 AM | A+A A-

ಸ್ಯಾಮ್ ಪಿತ್ರೋಡಾ, ಪ್ರಧಾನಿ ಮೋದಿ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿಶ್ವಾಸಾರ್ಹ ಸಲಹೆಗಾರ ಹಾಗೂ ಮಾರ್ಗದರ್ಶಕರು, ಕಾಂಗ್ರೆಸ್ ಪರ ಪಾಕಿಸ್ತಾನ ರಾಷ್ಟ್ರೀಯ ದಿನ ಸಂಭ್ರಮಿಸುವವರು ಭಾರತೀಯ ವಾಯುದಾಳಿ ಬಗ್ಗೆ ಪ್ರಶ್ನಿಸುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಮೋದಿ ಟ್ವೀಟ್ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.
ಸರಣಿ ಟ್ವಿಟ್ ಮಾಡಿರುವ ಪ್ರಧಾನಿ ಮೋದಿ, ಉಗ್ರರ ವಿರುದ್ಧದ ದಾಳಿಗೆ ಕಾಂಗ್ರೆಸ್ ಯಾವ ರೀತಿ ಪ್ರತಿಕ್ರಿಯೆ ನೀಡಿದೆ ಎಂಬುದು ಇಡೀ ರಾಷ್ಟ್ರಕ್ಕೆ ಗೊತ್ತಿದೆ. ಇದು ನವ ಭಾರತ, ಉಗ್ರರಿಗೆ ಅವರ ಭಾಷೆಯಲ್ಲಿಯೇ ಉತ್ತರ ನೀಡಿದ್ದೇವೆ, ಹಿತದೃಷ್ಟಿಯಿಂದ ಅವರು ಕೂಡಾ ಇದನ್ನು ಅರ್ಥಮಾಡಿಕೊಂಡಿದ್ದಾರೆ ಎಂದಿದ್ದಾರೆ.
Opposition insults our forces time and again.
— Chowkidar Narendra Modi (@narendramodi) March 22, 2019
I appeal to my fellow Indians- question Opposition leaders on their statements.
Tell them- 130 crore Indians will not forgive or forget the Opposition for their antics.
India stands firmly with our forces. #JantaMaafNahiKaregi https://t.co/rwpFKMMeHY