ಜೆಟ್ ಏರ್ ವೇಸ್ ಆರ್ಥಿಕ ಬಿಕ್ಕಟ್ಟು: 13 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಸೇವೆ ಸ್ಥಗಿತ!

ಜೆಟ್ ಏರ್ ವೇಸ್ ವಿಮಾನಯಾನ ಸಂಸ್ಛೆಯ ಆರ್ಥಿಕ ಸಂಕಷ್ಟ ಮತ್ತಷ್ಟು ಬಿಗಡಾಯಿಸಿದ್ದು, 13 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಸಂಸ್ಥೆಯ ಸೇವೆ ಸ್ಥಗಿತವಾಗಿದೆ ಎನ್ನಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಜೆಟ್ ಏರ್ ವೇಸ್ ವಿಮಾನಯಾನ ಸಂಸ್ಛೆಯ ಆರ್ಥಿಕ ಸಂಕಷ್ಟ ಮತ್ತಷ್ಟು ಬಿಗಡಾಯಿಸಿದ್ದು, 13 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಸಂಸ್ಥೆಯ ಸೇವೆ ಸ್ಥಗಿತವಾಗಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಏಪ್ರಿಲ್ ಅಂತ್ಯದವರೆಗೂ ಪುಣೆ-ಅಬುದಾಬಿ, ಪುಣೆ-ಸಿಂಗಾಪುರ, ಮುಂಬೈ-ಮ್ಯಾಂಚೆಸ್ಟರ್ ಸೇರಿದಂತೆ ಒಟ್ಟು 13 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿನ ಜೆಟ್ ಏರ್ ವೇಸ್ ವಿಮಾನಗಳ ಹಾರಾಟ ಬಂದ್ ಆಗಿದೆ. ಇನ್ನು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಜೆಟ್ ಏರ್ ವೇಸ್ ವಿಮಾನಗಳ ಬಾಡಿಗೆ ಭರಿಸಲಾಗದೇ ಮತ್ತೆ 7 ವಿಮಾನಗಳ ಹಾರಾಟ ಸ್ಥಗಿತಗೊಳಿಸಿದ್ದು, ಇದರೊಂದಿಗೆ ಸ್ಥಗಿತಗೊಂಡ ವಿಮಾನಗಳ ಸಂಖ್ಯೆ 54ಕ್ಕೆ ಏರಿಕೆಯಾಗಿದೆ.
ಈ ಬಗ್ಗೆ ಷೇರುಮಾರುಕಟ್ಟೆ ಕಚೇರಿಗೆ ಸ್ವತಃ ಜೆಟ್ ಏರ್ ವೇಸ್ ಮಾಹಿತಿ ನೀಡಿದ್ದು, ಬಾಡಿಗೆ ಹಣ ಭರಿಸಲಾಗದೇ ತಾನು ಮತ್ತೆ 7 ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ. ಸಂಸ್ಥೆಯ ಮೂಲಗಳು ತಿಳಿಸಿರುವಂತೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳೂ ಸೇರಿದಂತೆ ನಿತ್ಯ 600 ಮಾರ್ಗಗಳಲ್ಲಿ ಸಂಚರಿಸುತ್ತಿದ್ದ ವಿಮಾನಗಳು ಇದೀಗ ಕೇವಲ 119 ಮಾರ್ಗಗಳಲ್ಲಿ ಮಾತ್ರ ಸಂಚರಿಸುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com