ಹಿಂದೂ ಯುವತಿಯ ಅಪಹರಣ, ಒತ್ತಾಯಪೂರ್ವಕ ಮತಾಂತರ: ವಿವರ ಕೇಳಿದ ಸುಷ್ಮಾ ಸ್ವರಾಜ್; ಆಂತರಿಕ ವಿಷಯ ಅಂದ್ರು ಪಾಕ್ ಸಚಿವ

ಪಾಕಿಸ್ತಾನದಲ್ಲಿ ಹಿಂದೂ ಯುವತಿಯ ಅಪಹರಣ, ಒತ್ತಾಯಪೂರ್ವಕ ಮತಾಂತರ ನಡೆದಿರುವ ಘಟನೆ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನದಲ್ಲಿರುವ ಭಾರತದ ಹೈ ಕಮಿಷನ್ ನಿಂದ ವರದಿ ಕೇಳಿದ್ದಾರೆ.
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್
ನವದೆಹಲಿ: ಪಾಕಿಸ್ತಾನದಲ್ಲಿ ಹಿಂದೂ ಯುವತಿಯ ಅಪಹರಣ, ಒತ್ತಾಯಪೂರ್ವಕ ಮತಾಂತರ ನಡೆದಿರುವ ಘಟನೆ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನದಲ್ಲಿರುವ ಭಾರತದ ಹೈ ಕಮಿಷನ್ ನಿಂದ ವರದಿ ಕೇಳಿದ್ದಾರೆ.  
ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಇಬ್ಬರು ಹಿಂದೂ ಯುವತಿಯರನ್ನು ಹೋಲಿ ಹಬ್ಬದ ಮುನ್ನಾದಿನ ಅಪಹರಣ ಮಾಡಿ ಒತ್ತಾಯಪೂರ್ವಕ ಮತಾಂತರ ಮಾಡಲಾಗಿದೆ ಎಂಬ ವರದಿಗಳು ಪ್ರಕಟಗೊಂಡಿದ್ದವು. ಈ ಕುರಿತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾರತ ಹೈಕಮಿಷನ್ ನಿಂದ ವರದಿ ಕೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. 
ಸುಷ್ಮಾ ಸ್ವರಾಜ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ಮಾಹಿತಿ ಮತ್ತು ಪ್ರಸಾರ ಸಚಿವ ಫಾಹದ್ ಚೌಧರಿ, ಇದು ಪಾಕಿಸ್ತಾನದ ಆಂತರಿಕ ವಿಷಯ ಎಂದು ತಿರುಗೇಟು ನೀಡಿದ್ದಾರೆ. ಪಾಕ್ ಸಚಿವರ ಪ್ರತಿಕ್ರಿಯೆಗೆ ಮರು ಪ್ರತಿಕ್ರಿಯೆ ನೀಡಿರುವ ಸುಷ್ಮಾ ಸ್ವರಾಜ್, ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂ ಯುವತಿಯರ ಅಪಹರಣ, ಒತ್ತಾಯಪೂರ್ವಕ ಮತಾಂತರದ ವಿಷಯದ ಬಗ್ಗೆ ನಾನು ಭಾರತ ಹೈಕಮಿಷನ್ ನಿಂದ ವರದಿ ಕೇಳಿದ್ದೆ. ಆದರೆ ನಿಮಗೇಕೆ ತಪ್ಪಿತಸ್ಥ ಭಾವನೆ ಕಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com